ಕಾಯಯ್ಯ ಕರುಣಿ ಮುಕ್ತಿಸರಣಿ
ಮೋಹಾಂಧಕಾರ ತರಣಿ ಕರುಣಿ ಕಾಯಯ್ಯ ಪ.
ನಾನಾ ಯೋನಿಗಳಲ್ಲಿ ನಿಂದು ನೊಂದೆಹೀನತೆಯ ಕಳೆದು ಕಾಯಯ್ಯಗೋವಿಂದ ಮುಕುಂದ ಇದೇನು ಚೆಂದ 1
ನೀನಲ್ಲದನ್ಯರನು ನಾನರಿಯೆಜ್ಞಾನಿಗಳರಸ ಕಾದುಕೊಂಬುದಿನ್ನಾರುಎನ್ನ ತೋರು ಮುಂದಾರು 2
ಶ್ರೀಹಯವದನ ಪ್ರಭುವೆ ನೀನು ಸರ್ವಜ್ಞನೇಹವನು ಮಾಡು ಎಂದೆಂದು ನಾ ದಾಸಶ್ರೀನಿವಾಸ ಪಾಪನಾಶ3
***