subodhendra teertha rayara mutt stutih
ರಾಗ : ಕಾಂಬೋಧಿ ತಾಳ : ಏಕ
ಪಾಹಿ ಪಾಹಿ ಜಿತಮಾರ ।
ಪಾಹಿ ಸುಬೋಧೇಂದ್ರ ಸಮೀರ ।
ಮಹಾ ಮತಾಬ್ದೀಂದು ದೀನಾಮರ ।
ಮಹಿಜ ಸುಹಿತ ಮಹಿತ ।। ಪಲ್ಲವಿ ।।
ನಿರ್ಮಲಾತ್ಮ ಸದ್ಗುರು ಧೀರ ।
ಕರ್ಮ ವಿಷಯಾಪೇಕ್ಷ ದೂರ ।
ಧರ್ಮಾಸಕ್ತ ಲೋಕೋದ್ಧಾರ ಶರ್ಮ । ಸು ।
ಶರ್ಮಾದ ಭರ್ಮಾಂಗ ಮರ್ಮಜ್ಞ ।। ಚರಣ ।।
ಅರ್ಕ ಮಹಿಮನೆ ಧೀಮಂತ ।
ಅರ್ಕಜನೋಲಿದಾನೀ ಶಾಂತ ।
ಮರ್ಕಟ ದುರ್ವಾದಿ ಧ್ವಾಂತ ಅರ್ಕ । ಕು ।
ತರ್ಕ ಸಂಪರ್ಕಾರ್ಹ ಅರ್ಕಾಭ ಪಾಹಿ ।। ಚರಣ ।।
ತೀರ್ಥ ಪಾಲಾ ಭಕ್ತಾಧೀನಾ ।
ತೀರ್ಥಾ೦ಗ್ರಿ ಪ್ರಾಣೇಶ ವಿಠ್ಠಲನ ।
ತೀರ್ಥ ದೂತ ನೀನಿದ್ದ ಸ್ಥಾನ ತೀರ್ಥವು ।
ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ ।। ಚರಣ ।।
****
ವಿವರಣೆ :
ಜಿತಮಾರ = ಮನ್ಮಥನ ಗೆದ್ದವರು
ಅಮರ ಮಹಿ = ಕಲ್ಪವೃಕ್ಷ
ಶರ್ಮ = ಆನಂದ
ಸುಶರ್ಮದ = ಬ್ರಹ್ಮ ಜ್ಞಾನವನ್ನು ಕೊಡುವವ
ಭರ್ಮಾಂಗ = ಬಂಗಾರದಂತಹ ಕಾಂತಿಯುಳ್ಳ ಅಂಗ ಉಳ್ಳವರು
ಅರ್ಕ = ಸೂರ್ಯ
ಅರ್ಕ ಮಹಿಮಾ = ಅನಂತ ಮಹಿಮಾ
ಸಂಪರ್ಕಾಹ = ಮಿಥ್ಯಾವಾದದ ಸಂಪರ್ಕವನ್ನು ಹಾಳು ಮಾಡತಕ್ಕವರು
ತೀರ್ಥ ಪಾಲ = ಸದ್ಧರ್ಮಗಳನ್ನು ಪಾರಿಪಾಲಿಸುವವ
ತೀರ್ಥಾ೦ಘ್ರಿ = ಪಾದದಿಂದ ಗಂಗೆಯನ್ನು ಪಡೆದವನು
ತೀರ್ಥ ದೂತ = ಧರ್ಮ ದೂತ
ತೀರ್ಥವು = ಪುಣ್ಯ ಕ್ಷೇತ್ರ
ತೀರ್ಥಪ = ಶಾಸ್ತ್ರ ಪಾಲನ
ತೀರ್ಥಪ = ಯತಿ ಶ್ರೇಷ್ಠ
ತೀರ್ಥಮಾಂ = ನನ್ನನ್ನು ಪುನೀತನನ್ನಾಗಿ ಮಾಡು!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*******
by ಪ್ರಾಣೇಶದಾಸರು
ಪಾಹಿಪಾಹಿಜಿತಮಾರ |ಪಾಹಿಸುಬೋಧೇಂದ್ರಸಮೀರ||ಮಹಾ ಮತಾಬ್ಧೀಂದು ದೀನಾಮರ |ಮಹಿಜ, ಸುಹಿತ, ಮಹಿತ ಪ
ನಿರ್ಮಲಾತ್ಮ ಸದ್ಗುರು ಧೀರ |ಕರ್ಮವಿಷಯಾಪೇಕ್ಷಾ ದೂರ ||ಧರ್ಮಾಸಕ್ತ ಲೋಕೋದ್ಧಾರಶರ್ಮಸು |ಶರ್ಮಾದ ಭರ್ಮಾಂಗ ಮರ್ಮಜÕ 1
ಅರ್ಕಮಹಿಮನೆ ಧೀಮಂತ |ಅರ್ಕಜನೊಲಿದಾನೀ ಶಾಂತ ||ಮರ್ಕಟದುರ್ವಾದಿಧ್ವಾಂತಅರ್ಕಕು |ತರ್ಕ ಸಂಪರ್ಕಾಹ ಅರ್ಕಾಭ ಪಾಹಿ 2
ತೀರ್ಥ ಪಾಲಾ ಭಕ್ತಾಧೀನ |ತೀರ್ಥಾಂಘ್ರಿ ಪ್ರಾಣೇಶ ವಿಠಲನ ||ತೀರ್ಥದೂತ ನೀನಿದ್ದ ಸ್ಠಾನ ತೀರ್ಥವು |ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ 3
*******