Showing posts with label ಶರಣು ಗುರುರಾಜ ಶರಣು ರವಿ ತೇಜ ನಂಬಿದವರ others. Show all posts
Showing posts with label ಶರಣು ಗುರುರಾಜ ಶರಣು ರವಿ ತೇಜ ನಂಬಿದವರ others. Show all posts

Thursday, 29 July 2021

ಶರಣು ಗುರುರಾಜ ಶರಣು ರವಿ ತೇಜ ನಂಬಿದವರ ankita others

 ಶರಣು  ಗುರುರಾಜ  ಶರಣು  ರವಿ  ತೇಜ

ನಂಬಿದವರ  ಬೇಡಿಕೆಗಳ  ನೀಡುವಂಥ ಯೋಗಿ ರಾಜ  II ಪ  II


ತುಂಗಾ ನದಿಯ  ತೀರವಾಸಿ ವರಮಂತ್ರಾಲಯ  ತಾಪಸಿ

ಬೃಂದಾವನ  ಜ್ಯೋತಿ  ರೂಪ  ನೀವೇ  ನಮಗೆ ದಾರಿದೀಪ  II ಶರಣು  II


ಗುರುವು  ನೀವೇ  ತಂದೆ  ನೀವೇ  ನಮ್ಮಕಾಯುವ ದೈವ  ನೀವೇ

ನಿಮ್ಮ  ನಾಮಾಮೃತವ ಜಪಿಸಿ  ಚಿಂತೆಗಳನು  ಮರೆವೆ  ನಾನು  II ಶರಣು  II

***


Sharanu gururaja sharanu ravi teja

Nambidavara bedikegala niduvantha yogi raja II pa II

Thunga nadiya tiravasi varamanthralaya tapasi

brindavana jyothi roopa nive namage darideepa II sharanu II

Guruvu nive thande nive nammakayuva daiva nive

Nimma namamamruthava japise chinthegalanu mareve nanu II sharanu II

***