Showing posts with label ಆರುತಿಯನೆತ್ತಿರೆ ನಾರೇರೆಲ್ಲರು traditional gowri arati haadu SAMPRADAYA. Show all posts
Showing posts with label ಆರುತಿಯನೆತ್ತಿರೆ ನಾರೇರೆಲ್ಲರು traditional gowri arati haadu SAMPRADAYA. Show all posts

Friday, 27 December 2019

ಆರುತಿಯನೆತ್ತಿರೆ ನಾರೇರೆಲ್ಲರು traditional gowri arati haadu SAMPRADAYA

ಆರತಿಯನೆತ್ತಿರೆ ನಾರೇರೆಲ್ಲರು||pa||

ಕಾರುಣ್ಯ ಪಾಂಗಳಿಗೆ ಗೌರಿದೇವಿಗೆ||a.pa||

ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ
ಜೀವಕೋಟಿಗನ್ನವಿತ್ತು ಕಾವ ದೇವಿಗೆ ||1||

ಸರ್ವ ಸೌಭಾಗ್ಯವೀವ ಶರ್ವಜಾಯೆಗೆ
ಪರ್ವತೇಶ ತನಯಳಿಗೆ ಗರ್ವರಹಿತೆಗೆ ||2||

ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ
ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ ||3||
*******