Showing posts with label ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ankita gururama vittala. Show all posts
Showing posts with label ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ankita gururama vittala. Show all posts

Friday, 4 June 2021

ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ

ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ಪರಿಪರಿ ವಿಧದಲಿ ಭಾವಿಸಿ ನೋಡಲು ಸರಸಿಜಭವ ರುದ್ರಾದ್ಯರಿಗೆಲ್ಲ ಅ.ಪ ಗುರುಪೂರ್ಣ ಪ್ರಜ್ಞಾ ಚಾರ್ಯರ ಉಕ್ತಿ | ಅನುಸರಿಸಿದವರಿಗೆ ದೊರಕುವುದೆಂದಿಗೂ ಶಾಶ್ವತ ನಿಜಮುಕ್ತಿ ಅರಿಯದ ವಾದಗಳೆಲ್ಲ ಕುಯುಕ್ತಿ ಸರ್ವಜೀವರಲಿ ಹರಿಯೆ ವ್ಯಾಪ್ತಿ 1 ತೇನವಿನಾ ತೃಣಮಪಿನಚಲತಿ ಎಂಬ ಶ್ರುತ್ಯರ್ಥವ ಗುರುಬೋ- ಧಾನುಸಾರ ತಿಳಿಯಲು ತನ್ನಯ ಬಿಂಬಾ ಮಾನಸ ಪೀಠದಿ ಹೊಳೆಯಲು ದರುಶನ- ದಾನಂದ ಸುಖಾಮೃತ ತಾನುಂಬಾ 2 ತ್ರಿವಿಧ ಚೇತನದಿ ಯೋಗ್ಯತೆ ಮೀರದಲಿ | ಗುಣಕರ್ಮಗಳನು ಒಂ- ದೆವೆ ಮಾತ್ರವು ತಪ್ಪದೆ ನಡೆಸುತಲಿರುವ ಪವನಾಂತರ್ಗತ ಗುರುರಾಮವಿಠಲ ಜವನವರಿಗೆ ಒಪ್ಪಿಸನು ತನ್ನವರನು 3