ಶ್ರೀ ಗುರುರಾಮವಿಠಲ ದಾಸರ ರಚನೆ
ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ಪ ಪರಿಪರಿ ವಿಧದಲಿ ಭಾವಿಸಿ ನೋಡಲು ಸರಸಿಜಭವ ರುದ್ರಾದ್ಯರಿಗೆಲ್ಲ ಅ.ಪ ಗುರುಪೂರ್ಣ ಪ್ರಜ್ಞಾ ಚಾರ್ಯರ ಉಕ್ತಿ | ಅನುಸರಿಸಿದವರಿಗೆ ದೊರಕುವುದೆಂದಿಗೂ ಶಾಶ್ವತ ನಿಜಮುಕ್ತಿ ಅರಿಯದ ವಾದಗಳೆಲ್ಲ ಕುಯುಕ್ತಿ ಸರ್ವಜೀವರಲಿ ಹರಿಯೆ ವ್ಯಾಪ್ತಿ 1 ತೇನವಿನಾ ತೃಣಮಪಿನಚಲತಿ ಎಂಬ ಶ್ರುತ್ಯರ್ಥವ ಗುರುಬೋ- ಧಾನುಸಾರ ತಿಳಿಯಲು ತನ್ನಯ ಬಿಂಬಾ ಮಾನಸ ಪೀಠದಿ ಹೊಳೆಯಲು ದರುಶನ- ದಾನಂದ ಸುಖಾಮೃತ ತಾನುಂಬಾ 2 ತ್ರಿವಿಧ ಚೇತನದಿ ಯೋಗ್ಯತೆ ಮೀರದಲಿ | ಗುಣಕರ್ಮಗಳನು ಒಂ- ದೆವೆ ಮಾತ್ರವು ತಪ್ಪದೆ ನಡೆಸುತಲಿರುವ ಪವನಾಂತರ್ಗತ ಗುರುರಾಮವಿಠಲ ಜವನವರಿಗೆ ಒಪ್ಪಿಸನು ತನ್ನವರನು 3
No comments:
Post a Comment