Showing posts with label ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ purandara vittala MADI MADI ENDU ADIGADIGE HAARUVE. Show all posts
Showing posts with label ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ purandara vittala MADI MADI ENDU ADIGADIGE HAARUVE. Show all posts

Sunday 5 December 2021

ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ purandara vittala MADI MADI ENDU ADIGADIGE HAARUVE


ಪುರಂದರದಾಸರು


ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುವೆ
ಮಡಿ ಮಾಡುವ ಬಗೆ ಬೇರುಂಟು ||ಪ||

ಪೊಡವಿ ಪಾಲಕನ ಪಾದ ಧ್ಯಾನವನು
ಬಿಡದೆ ಮಾಡುವುದದು ಮಡಿಯು ||ಅ.ಪ||

ಬಟ್ಟೆಯ ನೀರೊಳಗದ್ದಿ ಒಣಗಿಸಿ
ಉಟ್ಟು ಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ
ಬಿಟ್ಟು ನಡೆದರೆ ಅದು ಮಡಿಯು ||

ದಶಮಿ ದ್ವಾದಶಿ ಪುಣ್ಯ ದಿನದಲಿ
ವಸುದೇವ ಸುತನನು ಪೂಜಿಸದೆ
ದೋಷಕಂಜದೆ ಪರರನ್ನ ಭುಂಜಿಸಿ ಯಮ-
ಪಾಶಕೆ ಸಿಲುಕುವುದದು ಮಡಿಯು ||

ಹಸಿದು ಭೂಸುರರು ಮಧ್ಯಾಹ್ನ ಕಾಲಕೆ
ಕುಸಿದು ಮನೆಗೆ ಬಳಲುತ ಬಂದರೆ
ಮಸಣಿಗೊಂದು ಗತಿಯಿಲ್ಲವೆಂದು ತಾ
ಹಸನಾಗಿ ಉಂಬೋದು ಹೊಲೆ ಮಡಿಯು ||

ಇಚ್ಛೆಯಿಂದ ಮಲ ಮೂತ್ರ ಶರೀರವ
ನೆಚ್ಚಿ ತೊಳೆಯಲು ಅದು ಮಡಿಯೆ
ಅಚ್ಯುತಾನಂತನ ನಾಮವ ನೆನೆದು
ಸಂಚಿತ ಕಳೆವುದು ಅದು ಮಡಿಯು ||

ಹಿರಿಯರ ಗುರುಗಳ ಹರಿ ದಾಸರುಗಳ
ಚರಣಕೆರಗಿ ಬಲು ಭಕ್ತಿಯಲಿ
ಪರಿಪಾಲಿಸು ಎಂದು ಪುರಂದರ ವಿಠಲನ
ಇರುಳು ಹಗಲು ಸ್ಮರಿಸುವುದು ಮಡಿಯು |
***

ರಾಗ ಶಂಕರಾಭರಣ. ಆದಿ ತಾಳ (raga tala may differ in audio)
nadanamakriya-Aadi - Purandaradasa

Naneke badavanu naneke paradesi
Shrinidhe hari enage niniruva tanaka||

Puttisida tai tande ishta mitranu nine
Asta bandhuvu sarva balaga nine
pettigeyolagina ashtabharana nine
Shrestha muruti Krishna niniruva tanaka naneke||1||

Oda huttidava nine odalighakuva nine
Udalu hodiyalu vastra koduvavanu nine
madadi makkalanella kadehayisuva nine
Bidade salahuva odeya niniruva tanaka naneke||2||

Vidye heluva nine buddhi kalisuva nine
Uddhara kartru mama svami nine
Muddu Siri Purandara Vittalaninnadi Mele
Biddu kondiruva enagyatara bhayavonaneke||3||
***

pallavi

maDi maDi maDiyendu aDigaDigahAruve maDi mADu bage bEruNTu

anupallavi

poDavi pAlakana pAda dhyAnavanu biDade mADuvudadu maDiyu

caraNam 1

baTTeya nIroLagatti onagisi uTTu koNDare adu maDiyalla
hoTTeyoLagina kAma krOdha mada matsara biTTu naDedare adu maDiyu

caraNam 2

dashami dvAdashi puNya dinadali vasudEva sutananu pUjisade
dOSakanjade pararanna bhunjisi yama pAshake silukuvudadu maDiye

caraNam 3

hasidu bhUsuraru madhyAhna kAlake kusidu manage baLaluta baddare
masaNigondu gatiyillavendu tA hasanAgi umbOdu hole maDiyu

caraNam 4

icceyinda mala mUtra sharIrava necci toLeyalu adu maDiye
acyutAnantana nAmava nenedu sancita kaLevudu adu maDiyu

caraNam 5

hariyara gurugaLa hari dAsarugaLa caraNakeragi balu bhaktiyali
paripAlisu endu purandara viTTalana iruLu hagalu smarisuvudu maDiyu
***

madi madi madi endu adigadi haruve madi mAduva bage bEruntu

podavi pAlakana pAda dhyanavanu bidade mAduvudu adu madiyu


batteya neeroLagaddi moLagisi uttukondare adu madiyalla

hotteyoLagina kAma krodhavanu bittu nadedare adu madiyu

hiriyara gurugaLa haridAsarugala charana keragi bhakutiyali

paripAlisu endu purandaravithalana iruLu hagalu nenevudu adu madiyu
***

ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |
ಮಡಿ ಮಾಡುವ ಬಗೆ ಬೇರುಂಟು ಪ.

ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪ

ಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1

ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2

ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3

ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4

ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5

ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6

ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
**********

ಮಡಿ ಮಡಿ ಮಡಿಯೆಂದು ಅಡಿಗಡಿಗಹಾರುವೆ ಮಡಿ ಮಾಡು ಬಗೆ ಬೇರುಂಟು

ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು

೧: ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು

೨: ದಶಮಿ ದ್ವಾದಶಿ ಪುಣ್ಯ ದಿನದಲಿ ವಸುದೇವ ಸುತನನು ಪೂಜಿಸದೆ
ದೋಷಕಂಜದೆ ಪರರನ್ನ ಭುಂಜಿಸಿ ಯಮ ಪಾಶಕೆ ಸಿಲುಕುವುದದು ಮಡಿಯೆ

೩: ಹಸಿದು ಭೂಸುರರು ಮಧ್ಯಾಹ್ನ ಕಾಲಕೆ ಕುಸಿದು ಮನಗೆ ಬಳಲುತ ಬಂದರೆ
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು

೪: ಇಚ್ಚೆಯಿಂದ ಮಲ ಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೆ
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು

೫: ಹರಿಯರ ಗುರುಗಳ ಹರಿ ದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ
ಪರಿಪಾಲಿಸು ಎಂದು ಪುರಂದರ ವಿಠಲನ ಇರುಳು ಹಗಲು ಸ್ಮರಿಸುವುದು ಮಡಿಯು
********