Showing posts with label ಶ್ರೀಮದಕ್ಷೋಭ್ಯತೀರ್ಥರ ದಿವ್ಯ ಚರಿತಂ karpara narahari akshobhya teertha stutih. Show all posts
Showing posts with label ಶ್ರೀಮದಕ್ಷೋಭ್ಯತೀರ್ಥರ ದಿವ್ಯ ಚರಿತಂ karpara narahari akshobhya teertha stutih. Show all posts

Saturday 1 May 2021

ಶ್ರೀಮದಕ್ಷೋಭ್ಯತೀರ್ಥರ ದಿವ್ಯ ಚರಿತಂ ankita karpara narahari akshobhya teertha stutih

 ಶ್ರೀ ಕಾರ್ಪರ ನರಹರಿ ದಾಸರು

ರಾಗ : ಕಾಂಬೋಧಿ                       ತಾಳ : ಝಂಪೆ 


ಶ್ರೀಮದಕ್ಷೋಭ್ಯತೀರ್ಥರ ದಿವ್ಯ ಚರಿತಂ ।

ಕಾಮಿತ ಪ್ರದವಹುದು ಶೃಣ್ವತಾಂ ಸತತಂ              ।। ಪಲ್ಲವಿ ।।


ಈ ಮಹಿಯೊಳವತರಿಸಿ ಭೂಮಿಜಾ ಸಹಿತ । ಶ್ರೀ ।   

ರಾಮನಂಘ್ರಿದ್ವಯವ ಪೂಜಿಸುತಲಿ ।

ಭೂಮಿ ನಿರ್ಜರಜರಸ್ತೋಮ ವಂದಿತರಾಗಿ ।

ವ್ಯೋಮಕೇಶಾಂಶರೆಂದೆನಿಸಿ ಮೆರೆದಂಥ              ।। ಚರಣ ।।


ಮೋದತೀರ್ಥರ ಮತ ಮಹೋದಧಿಗೆ । ಪೂರ್ಣನು ।

ದೀಧಿತಿಯರೆಂದೆನಿಸಿ ದಿಗ್ವಲಯದಿ ।

ಭೇದ ಬೋಧಕ ಸೂತ್ರವಾದದಿಂದಲಿ । ಮಹಾ ।

ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ              ।। ಚರಣ ।।


ವಿಠ್ಠಲನ ಪಾದ ಮದುಮ ಷಟ್ಟದರೆಂದೆನಿಸಿ ।

ಸ್ವಪ್ನ ಸೂಚಿತ ಚಂದ್ರಭಾಗ ತಟದಿ ।

ಶ್ರೇಷ್ಠ ಕುದುರೆಯ ನೇರಿ ನದಿಯ ಜಲವ ಕುಡಿದವರ ।

ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ                 ।। ಚರಣ ।।


ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ ।

ದೃಷ್ಟಿಯಿಂದಿವರಿಗೆ ಸುಮುಹೂರ್ತದಿ ।

ಪಟ್ಟ ಗಟ್ಟಿದರು ಜಯತೀರ್ಥ ನಾಮವ ನೀಡುತ ।

ತೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು       ।। ಚರಣ ।।


ದೇಶ ದೇಶದಿ ಬರುವ ಭೂಸುರೋತ್ತಮರ । ಅಭಿ ।

ಲಾಷೆಗಳನೆಲ್ಲ ಪೂರೈಸಿ ಪೊರೆವ ।

ಶ್ರೀಶ ಕಾರ್ಪರ ಕ್ಷೇತ್ರ ವಾಸ ಅಶ್ವತ್ಥ । ನರ ।

ಕೇಸರಿಯ ನೋಲಿಸಿದ ಯತೀಶರಿವರೆಂದು          ।। ಚರಣ ।।

****