Showing posts with label ಪೋಗುವುದುಚಿತವೆ ಮಾಧವ ಮಧುರೆಗೆ purandara vittala POGUVUDUCHITAVE MAADHAVA MADHUREGE. Show all posts
Showing posts with label ಪೋಗುವುದುಚಿತವೆ ಮಾಧವ ಮಧುರೆಗೆ purandara vittala POGUVUDUCHITAVE MAADHAVA MADHUREGE. Show all posts

Monday 6 December 2021

ಪೋಗುವುದುಚಿತವೆ ಮಾಧವ ಮಧುರೆಗೆ purandara vittala POGUVUDUCHITAVE MAADHAVA MADHUREGE

 ರಾಗ ಪೀಲು   ಆದಿತಾಳ 

Audio by Mrs. Nandini Sripad


ಪೋಗುವುದುಚಿತವೇ ಮಾಧವ ಮಧುರೆಗೆ ।
ಬಾಗುವೆ ನಿನಗೆ ॥ ಪ ॥

ನಾಗಶಯನ ನಿನ್ನಗಲಿ ಒಂದು ಕ್ಷಣ ।
ಹೇಗೆ ಸೈರಿಸುವೆವೋ ಆಗಮನುತ ಕೃಷ್ಣ ॥ ಅ ಪ ॥

ಅಕ್ರೂರನೆಂಬವನಿಲ್ಲಿಗೇಕೆ ಬಂದ । 
ಚಕ್ರಧರಗೂ ನಮಗೂ ।
ಸತ್ಕ್ರೀಡೆಗಳನೆಲ್ಲಾ ಕೆಡಿಸಬೇಕೆನುತಲಿ । 
ವಕ್ರನಂದದಲಿ ಬಂದು ॥
ಚಕ್ರಧರನೆ ಪೋಗಬೇಡ ನೀ ಮಧುರೆಗೆ ।
ಅಕ್ಕರದಿಂದಲಿ ಅಭಯ ಕೊಡೆಲೋ ಕೃಷ್ಣ ॥ 1 ॥

ಹುಟ್ಟಿಸಿದವನು ಭ್ರಷ್ಟ ಮಾಡುವರೇನೋ ।
ಕೃಷ್ಣರಾಯನೆ ನೀನು ।
ಎಷ್ಟು ಹೇಳಿದರೂ ಒಂದಿಷ್ಟು ದಯಬಾರದೆ । 
ಬೆನ್ನಟ್ಟಿದಲ್ಲದೆ ಬಿಡೆವೋ ॥
ಕೃಷ್ಣಯ್ಯ ನಿನ್ನೊಳು ಇಷ್ಟು ಗುಣಂಗಳ ।
ಭ್ರಷ್ಟವ ಮಾಡದೆ ಕೃಷ್ಣರಾಯನೆ ಬೇಗ ॥ 2 ॥

ಮಾರನ ಬಾಧೆಗೆ ಅಗಲಿ ನೀ ಮಧುರಾ । 
ಪುರಕಾಗಿ ಹೋಗುವರೆ ।
ಸೇರಿದವರನೆಲ್ಲಾ ಮೀರಿ ನೀ ಪೋದರೆ । 
ಯಾರೆಲೋ ಗತಿ ನಮಗೆ ॥
ವರದ ಶ್ರೀಪುರಂದರವಿಠಲರಾಯನೆ ।
ಸೆರಗೊಡ್ಡಿ ಬೇಡುವೆವೋ ನಿಲ್ಲು ನಿಲ್ಲೆಲೋ ಕೃಷ್ಣ ॥ 3 ॥
***

pallavi

pOguvuducitave mAdhava mathurege bAguve elo ninage nAgashayana ninnagali ondu kSaNa hEge sairisuvevo Agamanuta krSNa

caraNam 1

akrUranembuvanilligEtake banda cakradharagu namagu
satkrIDegaLanella keDisa bEkanutali vakranandadali bandu
cakradharane pOga bEDa nI mathurege akkaradindali abhaya koDelo krSNa

caraNam 2

huTTisidavaranu bhraSTa mADuvarEno krSNarAyane nInu
eSTu hELidaru ondiSTu daya bArade bennaTTidallade biDavo
krSNayya ninnoLu iSTu guNangaLa bhraSTava mADade krSNarAyane bEga

caraNam 3

mArana bAdege agali nI mathutApuragAgi hOguvare sEridavaranella mIri nI pOdare
yArelo gati namage varada puradara viTTalarAyane seragoTTi bEDuvevo nilli nillalo krSNa
***


ರಾಗ ತುಜಾವಂತು ಆದಿತಾಳ

ಪೋಗುವುದುಚಿತವೆ ಮಾಧವ ಮಧುರೆಗೆ
ಬಾಗುವೆ ಎಲೊ ನಿನಗೆ
ನಾಗಶಯನ ನಿನ್ನಗಲಿ ಒಂದು ಕ್ಷಣ
ಹೇಗೆ ಸೈರಿಸುವೆವೊ ಆಗಮನುತ ಕೃಷ್ಣ || ಪ ||

ಅಕ್ರೂರನೆಂಬುವನಿಲ್ಲಿಗೇತಕೆ ಬಂದ, ಚಕ್ರಧರಗು ನಮಗು
ಸತ್ಕ್ರೀಡೆಗಳನೆಲ್ಲ ಕೆಡಿಸಬೇಕನುತಲಿ, ವಕ್ರನಂದದಲಿ ಬಂದು
ಚಕ್ರಧರನೆ ಪೋಗಬೇಡ ನೀ ಮಧುರೆಗೆ, ಅಕ್ಕರದಿಂದಲಿ ಅಭಯ ಕೊಡೆಲೊ ಕೃಷ್ಣ ||

ಹುಟ್ಟಿಸಿದವರನು ಭ್ರಷ್ಟ ಮಾಡುವರೇನೊ, ಕೃಷ್ಣರಾಯನೆ ನೀನು
ಎಷ್ಟು ಹೇಳಿದರು ಒಂದಿಷ್ಟು ದಯ ಬಾರದೆ, ಬೆನ್ನಟ್ಟಿದಲ್ಲದೆ ಬಿಡವೊ
ಕೃಷ್ಣಯ್ಯ ನಿನ್ನೊಳು ಇಷ್ಟು ಗುಣಂಗಳ, ಭ್ರಷ್ಟವ ಮಾಡದೆ ಕೃಷ್ಣರಾಯನೆ ಬೇಗ ||

ಮಾರನ ಬಾದೆಗೆ ಅಗಲಿ ನೀ ಮಧುರಾ-ಪುರಕಾಗಿ ಹೋಗುವರೆ
ಸೇರಿದವರನೆಲ್ಲ ಮೀರಿ ನೀ ಪೋದರೆ , ಯಾರೆಲೊ ಗತಿ ನಮಗೆ
ವರದ ಶ್ರೀಪುರಂದರವಿಟ್ಠಲರಾಯನೆ, ಸೆರಗೊಡ್ಡಿ ಬೇಡುವೆವೊ ನಿಲ್ಲು ನಿಲ್ಲೆಲೊ ಕೃಷ್ಣ ||
********