ದಾನವನ ಕೊಂದದ್ದಲ್ಲ ಕಾಣಿರೋ ||ಪ||
ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ||
ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳು
ಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು
ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳು
ಗಂಟು ಹಾಕಿ ಕೊಂಡನಲ್ಲದೆ ದೇಹ ಸಂಬಂಧದಿಂದ
ತೊರವೆಯ ನರಸಿಂಹ ಪ್ರಹ್ಲಾದ ಪಾಲಕ
ಉರಿಮೋರೆ ದೇವ ನಮ್ಮ ಪುರಂದರ ವಿಠಲ
***
ರಾಗ ತೋಡಿ. ಆದಿ ತಾಳ (raga, taala may differ in audio)
pallavi
dAnavana kondaddalla kANirO
anupallavi
gAna vinOdi namma doreveya narasimha
caraNam 1
acca puruSanemba svacca ratna oDaloLu bicci nODidarinneSTu iddAvo endu
caraNam 2
neNtatanavu beLeya bEkendu karuLa koraLoLu kaNDu hAki koNDanallade dEha sambandhadinda
caraNam 3
doraveya narasimha prahlAda pAlaka urimOre dEva namma purandara viTTala
***
ದಾನವನ ಕೊಂದದ್ದಲ್ಲ ಕಾಣಿರೊ |
ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.
ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು 1
ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ 2
ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |ಉರಿಮೋರೆ ದೈವ ನಮ್ಮಪುರಂದರವಿಠಲ3
****