ಜಯ ಜಯತು ಶುಭಕಾಯ ಜಯಜಯತು
ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯ ಪ.
ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1
ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2
ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3
ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4
ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
****
ಜಯ ಜಯತು ಶುಭಕಾಯ ಜಯಜಯತು ಹರಿಪ್ರೀಯ
ಜಯತು ಜೀಯ ಮಧ್ವಾಖ್ಯಮುನಿರಾಯ || PA ||
ರಾಮಾವತಾರದಲಿ ಹನುಮಂತನಾಗಿ ನೀ
ತಾಮಸನ ಪುರವ ಅನಲಗಾಹುತಿಯನಿತ್ತೆ
ಭೂಮಿಜೆಯ ಕುಶಲವನು ರಘುನಾಥಗರುಹಿದೆ
ಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ || 1 ||
ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿ
ಪಾಪಿಮಾಗಧ ಬಕ ಕೀಚಕಾದಿಗಳ
ಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-
ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ || 2 ||
ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿ
ತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲು
ನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-
ರಾಯಣನೆ ಮೂಜಗಕೆ ಪರದೈವವೆಂದೊರೆದೆ || 3 ||
ದುರುಳ ವಾದಿಗಳಿಗುತ್ತರವ ಕೊಡಬೇಕೆನುತ
ಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿ
ದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆ
ಪರಮ ತತ್ವದ ಖಣಿಯೆ ಗುರುಶಿರೋಮಣಿಯೆ || 4 ||
ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವು
ನಿನ್ನ ಮತವೇ ಇಹಪರಕೆ ಸಾಧನವು
ಪನ್ನಂಗಶಯನ ಶ್ರೀ ಹಯವದನದಾಸರೊಳು
ನಿನ್ನ ಪೋಲುವರುಂಟೆ ಮಧ್ವಮುನಿರಾಯ || 5 ||
***
Jaya jayatu śubhakāya jayajayatu hariprīya jayatu jīya madhvākhyamunirāya || PA ||
rāmāvatāradali hanumantanāgi nī tāmasana purava analagāhutiyanitte bhūmijeya kuśalavanu raghunāthagaruhide svāmikāryava vahisi khaḷara nī taride || 1 ||
dvāparāntyadali śrīkr̥ṣṇanaṅghriya bhajisi pāpimāgadha baka kīcakādigaḷa kōpadindali taridu kurukulava nīnaḷide pra- tāpadindali merede khaḷara nī muride || 2 ||
māyigaḷu hecci matavella saṅkaravāgi tāyigaḷillada śiśugaḷante sujanariralu nīyavatarisi matavella ud’dharisi nā- rāyaṇane mūjagake paradaivavendorede || 3 ||
duruḷa vādigaḷiguttarava koḍabēkenuta saruva śāstrāmr̥tava sr̥jisi vākyagaḷa krōḍisi daruśana granthagaḷa racisi śiṣyarigitte parama tatvada khaṇiye guruśirōmaṇiye || 4 ||
ninna matavē vēdaśāstragaḷa sam’matavu ninna matavē ihaparake sādhanavu pannaṅgaśayana śrī hayavadanadāsaroḷu ninna pōluvaruṇṭe madhvamunirāya || 5 ||
Plain English
Jaya jayatu subhakaya jayajayatu haripriya jayatu jiya madhvakhyamuniraya || PA ||
ramavataradali hanumantanagi ni tamasana purava analagahutiyanitte bhumijeya kusalavanu raghunathagaruhide svamikaryava vahisi khalara ni taride || 1 ||
dvaparantyadali srikrsnananghriya bhajisi papimagadha baka kicakadigala kopadindali taridu kurukulava ninalide pra- tapadindali merede khalara ni muride || 2 ||
mayigalu hecci matavella sankaravagi tayigalillada sisugalante sujanariralu niyavatarisi matavella ud’dharisi na- rayanane mujagake paradaivavendorede || 3 ||
durula vadigaliguttarava kodabekenuta saruva sastramrtava srjisi vakyagala krodisi darusana granthagala racisi sisyarigitte parama tatvada khaniye gurusiromaniye || 4 ||
ninna matave vedasastragala sam’matavu ninna matave ihaparake sadhanavu pannangasayana sri hayavadanadasarolu ninna poluvarunte madhvamuniraya || 5 ||
***