..
kruti by shantibai dasaru ಶಾಂತಿಬಾಯಿ ದಾಸರು
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ
ಬಾಲೆ ದ್ರೌಪದಿ ಅಭಿಮಾನವ ಕಾಯ್ದಗೆ
ಭಾಳಲೋಚನ ಭವಹಾರಕಗೆ
ಮಂಗಲಂ ಜಯ ಮಂಗಲಂ ಪ
ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ
ಭಾಸ ಸರ್ವಾಂತರ ವಾಸ ಜಗದೀಶಗೆ
ತೋಷಪಾಲಕ ವಾಸುದೇವನಿಗೆ
ಮಂಗಲಂ ಜಯ ಮಂಗಲಂ 1
ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ
ಶರಧಿಗೆ ಸೇತು ಕಟ್ಟಿದ ಶ್ರೀರಾಮಗೆ
ಪರಮ ಪುರುಷ ವಿಶ್ವೇಶ್ವರಿಗೆ
ಮಂಗಲಂ ಜಯ ಮಂಗಲಂ 2
ಗಜಾಸುದ ವರವಿತ್ತ ಗಜಚರ್ಮಧಾರಗೆ
ಗಜರಾಜನ ಕಾಯ್ದ ಗೋವಿಂದಗೆ
ಗಜವದನನ ಪಿತ ಗೌರೀರ ಮಣಗೆ
ಅಜಪಿತನಾದ ನಾರಾಯಣಗೆ
ಮಂಗಲಂ ಜಯ ಮಂಗಲಂ 3
ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ
ಶಂಕರ ನಿಜಪದ ಶಾಂತಿಪಾಲಿಪಗುರು
ರಂಗರಕ್ಷಕ ಮಹಾಬಲೇಶ್ವರಗೆ
ಮಂಗಲಂ ಜಯ ಮಂಗಲಂ 4
***