Showing posts with label ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ uragadrivasa vittala NAARASIMHA SRI NAARASIMHA PAARUGAANISI DURITAUGHARISI. Show all posts
Showing posts with label ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ uragadrivasa vittala NAARASIMHA SRI NAARASIMHA PAARUGAANISI DURITAUGHARISI. Show all posts

Thursday, 2 December 2021

ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ankita uragadrivasa vittala NAARASIMHA SRI NAARASIMHA PAARUGAANISI DURITAUGHARISI



ನಾರಸಿಂಹ ಶ್ರೀ ನಾರಸಿಂಹ

ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ


ನರಹರಿ ಜ್ವರಹರ ಘೋರವ್ಯಾಧಿಯ

ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ


ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ

ಮೃಡನೆ ಪರನು ಎಂದು ನುಡಿದ ಕಶಿಪುವಿನ

ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ

ಧೃಡ ಭಕುತಗೆ ಬಂದೆಡರ ಬಿಡಿಸಿದೆ1


ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ

ದೃಷ್ಟಿಯಿಂದ ಅನಿಷ್ಟ ನಿವಾರಣ

ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ-

ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2


ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ

ವೇಂಕಟೇಶಾತ್ಮಕ ಭೀಕರ ರೂಪ

ಶಂಕರಾಂತರ್ಗತ ಸಂಕರುಷಣ ಮೂರ್ತೇ

ಮಂಕುಹರಿಸಿ ಪಾದಪಂಕಜ ತೋರಯ್ಯ 3

****

 ರಾಗ - ಹಂಸಧ್ವನಿ

ತಾಳ - ಆದಿತಾಳ


ನಾರಸಿಂಹ ಶ್ರೀ ನಾರಸಿಂಹ

ಪಾರುಗಾಣಿಸಿ ದುರಿತೌಘ ಹರಿಸಿ ಕಾಯೊ ll ಪ ll


ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯ ll ಅ ಪ ll


ಘುಡುಘುಡಿಸುತ ಪಲ್ಗಡಿದು ಚೆಂಡಾಡುತ 

ಮೃಡನೆ ಪರನು ಎಂದು ನುಡಿದ ಕಶಿಪುವಿನ

ಒಡನೆ ಕಂಬದಿ ಬಂದು ಒಡಲ ಬಗೆದು ನಿನ್ನ

ದೃಢಭಕುತಗೆ ಬಂದೆಡರ ಬಿಡಿಸಿದೆ ll 1 ll


ತುಷ್ಟಿ ಪಡಿಸೊ ಪರಮೇಷ್ಟಿಯಪಿತ ನಿನ್ನ

ದೃಷ್ಟಿಯಿಂದ ಅನಿಷ್ಟನಿವಾರಣ

ಅಷ್ಟಕರ್ತೃತ್ವದ ಪ್ರಬೋ ಕಷ್ಟ ಹರಿಸಿ ಭಕ್ತ

ರಿಷ್ಟಪಾಲಿಪ ಸರ್ವಸೃಷ್ಟಿಗೊಡೆಯ ದೇವ ll 2 ll


ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ

ವೇಂಕಟೇಶಾತ್ಮಕ ಭೀಕರರೂಪ

ಶಂಕರಾಂತರ್ಗತ ಸಂಕರುಷಣಮೂರ್ತೆ

ಮಂಕುಹರಿಸಿ ಪಾದಪಂಕಜ ತೋರಯ್ಯ ll 3 ll

*******