ankita upadesha by vijaya dasa
ರಾಗ : ಕಲ್ಯಾಣಿ ತಾಳ : ಆದಿ
ವೇಣುಗೋಪಾಲ ವಿಠ್ಠಲರೇಯಾ ।
ನಿನ್ನ ಪಾದರೇಣು -
ನಂಬಿದ ಮಾನವಾ ।
ಏನು ಅರಿಯದಲಿಪ್ಪ -
ನೀನೊಲಿದು ಕರುಣದಲಿ ।
ಜ್ಞಾನ ಭಕುತಿಯನು -
ಕೊಡುವದು ಸ್ವಾಮಿ ।। ಪಲ್ಲವಿ ।।
... ಓರ್ವನ ಪೆಸರುಗೊಂಡು -
ಪೇಳಲೇತಕೆ ಇನ್ನು ।
ಸರ್ವರನು ವಿಧದಲಿ ।
ಊರ್ವಿಯೊಳಗೆಯಿಟ್ಟು ಉದ್ಧರಿಸೆ ।
ಉರು ಕಾಲ ನಿರ್ವ್ಯಾಜದವನ ಮಾಡಿ ।।
ಸರ್ವರ ಗೋಸುಗ ನಾನು -
ತುತಿಸಿ ಯೋಗ್ಯರಿಗೆ ।
ಸರ್ವದಾ ಕೃಪೆ ಮಾಡೆಂದು ।
ಸರ್ವರಾಧಾರಿ ಸಿರಿ -
ವಿಜಯ ವಿಠ್ಠಲ ನಿನ್ನ ।
ಶರ್ವ ತುತಿಸಿ ಕಾಣ ನಾನೊಬ್ಬ
ಪೊಗಳುವೆನೆ ।। 3 ।।
****