..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀಭೂವರಾಹ ಸ್ತೊತ್ರ
ಭೂವರಾಹ ಭುವನವ ತಂದ ಭೂವರಾಹ ಪ
ಆನಮಿಪೆ ನಿನ್ನಂಬುಜ ಚರಣಕೆ ಆನಮಿಪೆ||
ಆನಮಿಸುವೆಮ್ಮ ದೋಷಗಳೆಣಿಸದೆ ಕಾಯೋ || ಭೂವರಾಹ ಅ.ಪ.
ನಾಶಿಜಾತ ನಾಶರಹಿತ ನಾಶಿಜಾತ ವಾಸುದೇವ
ನಾಳಿಜಾತ-ಜಲದೊಳು ಪೊಕ್ಕು ಅಸುರನಕೊಂದು-
ವಸುಧೆಯ ತಂದು-ಭೂವರಾಹ 1
ಅಂಬುಜಾಕ್ಷ | ಶಂಭುವಂದ್ಯ ಅಂಬುಜಾಕ್ಷ ಅಂಬು ಜೇಶ|
ಅಂಬುಜಾಕ್ಷ -ಅಂಬುಧಿ ಪೊಕ್ಕು-ಜಾಂಬುನದಾಕ್ಷಣ
-ಕೊಂದಿಧರೋದ್ಧರ - ಭೂವರಾಹ 2
ಸಹಸ್ರಶೀರ್ಷ| ಸಹಸ್ರ ಅಕ್ಷ ಸಹಸ್ರಪಾದ ಸಹಸ್ರನಾಮ-
ಸಹಸ್ರ ಶೀರ್ಷ- ಬ್ರಹ್ಮನಜನಕ ಮಹಿಶಿರಿ ಈಶ-
ಪ್ರಸನ್ನ ಶ್ರೀನಿವಾಸ ||ಭೂವರಾಹ 3
||ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||
***