ರಾಗ ಕೇದಾರಗೌಳ. ಛಾಪು ತಾಳ
ಗಜುಗನಾಡುತಲಿರ್ದನು ನಮ್ಮ ರಂಗ ||ಪ||
ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು ||ಅ ||
ಒಂದನ್ನೆ ಹಾರಿಸಿದ ವೇಗದಿ ಮ-
ತ್ತೊಂದರಿಂದಲಿ ತಾ ಬಡೆದ
ಒಂದೆ ಬಾರಿಗೆ ಎಲ್ಲ ಗಜುಗವ ಗೆಲಿದನು ||
ಬಚ್ಚಿಟ್ಟ ಗಜ್ಜುಗವ ಹುಡುಕೆಂದು
ಅಚ್ಯುತ ನಗುತ ನಿಂತ
ಮುಚ್ಚಿಟ್ಟ ಗಜುಗವು ದೊರಕಲಿಲ್ಲವೊ ಒಂದು ||
ಕಾಕಾಚಿ ಕೊಂಡ್ಹೋಯಿತು ಎನುತಲಿ ರಂಗ
ಆಕಾಶವನು ತೋರಿದ
ಬೇಕಾದ ಗಜುಗವ ನಿಮಗೆ ತರುವೆ ಎಂದ ||
ಗಜುಗ ಗಿಡಗಳನೇಕ ತೋರಿದವಯ್ಯ
ಗಜುಗ ಗೊಂಚಲುಗಳನೇಕ
ಗಜುಗದ ಗಂಟುಗಳ ಕಟ್ಟಿದರು ಮಕ್ಕಳು ||
ಪರಿ ಪರಿ ಗಜುಗದಾಟ ಮಕ್ಕಳ ಸಂಗಡ
ಗೆರೆಯ ದಾಟುವ ಆಟವು
ನೆರೆಹೊರೆ ಮಕ್ಕಳ ಕೂಡ ಸಂಭ್ರಮ ಮಾತು ||
ಬೊಮ್ಮನ ಪಡೆದಂಥ ಚಿಕ್ಕ ಕೂಸು
ಅಮ್ಮನ ತೊಡೆಯ ಮೇಲೆ
ಗಮ್ಮನೆ ಮಲಗಿದ ಆಟಂಗಳನೆ ಬಿಟ್ಟು ||
ಸುರರು ವಂದಿಸಿ ನಿಲ್ಲಲು ಯಕ್ಷ ಕಿನ್ನರರು
ಸ್ವರವೆತ್ತಿ ಸ್ತುತಿಗೈಯಲು
ದೊರೆ ತಂದೆ ಪುರಂದರವಿಠಲನು ಒಪ್ಪಿದ ||
***
ಗಜುಗನಾಡುತಲಿರ್ದನು ನಮ್ಮ ರಂಗ ||ಪ||
ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು ||ಅ ||
ಒಂದನ್ನೆ ಹಾರಿಸಿದ ವೇಗದಿ ಮ-
ತ್ತೊಂದರಿಂದಲಿ ತಾ ಬಡೆದ
ಒಂದೆ ಬಾರಿಗೆ ಎಲ್ಲ ಗಜುಗವ ಗೆಲಿದನು ||
ಬಚ್ಚಿಟ್ಟ ಗಜ್ಜುಗವ ಹುಡುಕೆಂದು
ಅಚ್ಯುತ ನಗುತ ನಿಂತ
ಮುಚ್ಚಿಟ್ಟ ಗಜುಗವು ದೊರಕಲಿಲ್ಲವೊ ಒಂದು ||
ಕಾಕಾಚಿ ಕೊಂಡ್ಹೋಯಿತು ಎನುತಲಿ ರಂಗ
ಆಕಾಶವನು ತೋರಿದ
ಬೇಕಾದ ಗಜುಗವ ನಿಮಗೆ ತರುವೆ ಎಂದ ||
ಗಜುಗ ಗಿಡಗಳನೇಕ ತೋರಿದವಯ್ಯ
ಗಜುಗ ಗೊಂಚಲುಗಳನೇಕ
ಗಜುಗದ ಗಂಟುಗಳ ಕಟ್ಟಿದರು ಮಕ್ಕಳು ||
ಪರಿ ಪರಿ ಗಜುಗದಾಟ ಮಕ್ಕಳ ಸಂಗಡ
ಗೆರೆಯ ದಾಟುವ ಆಟವು
ನೆರೆಹೊರೆ ಮಕ್ಕಳ ಕೂಡ ಸಂಭ್ರಮ ಮಾತು ||
ಬೊಮ್ಮನ ಪಡೆದಂಥ ಚಿಕ್ಕ ಕೂಸು
ಅಮ್ಮನ ತೊಡೆಯ ಮೇಲೆ
ಗಮ್ಮನೆ ಮಲಗಿದ ಆಟಂಗಳನೆ ಬಿಟ್ಟು ||
ಸುರರು ವಂದಿಸಿ ನಿಲ್ಲಲು ಯಕ್ಷ ಕಿನ್ನರರು
ಸ್ವರವೆತ್ತಿ ಸ್ತುತಿಗೈಯಲು
ದೊರೆ ತಂದೆ ಪುರಂದರವಿಠಲನು ಒಪ್ಪಿದ ||
***
pallavi
gajuganADutalirdanu namma ranga
anupallavi
vrajada makkaLa kUDa haruSadindali balu
caraNam 1
ondanne hArisida vEgadi mattondarindali
tA baDeda onde bArige ella gajugava gelidanu
caraNam 2
bacciTTa gajjugava huDukendu acyuta naguta
ninta mucciTTa gajugavu dorakalillavo enda
caraNam 3
kAkAci koNDhOyitu enutali ranga AkAshavanu
tOrida bEkAda gajugava nimage taruve enda
caraNam 4
gajuga kiDagaLanEka tOridavayya gajuga
goncalugaLanEka gajugada gaNTugaLa kaTTidaru makkaLu
caraNam 5
pari pari gajugadATa makkaLa sankaTa gereyadADuva
Atavu nere hore makkaLa kUDa sambhrama mAtu
caraNam 6
bommana paDEdantha cikka kUsu ammana toDeya
mEle gammane malagida AdangaLane biTTu
caraNam 7
suraru vandisi nillalu yakSa kinnararu svaravetti
stuti kaiyalu dore tande purandara viTTalanu oppida
***