Showing posts with label ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು vijaya vittala. Show all posts
Showing posts with label ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು vijaya vittala. Show all posts

Thursday, 17 October 2019

ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು ankita vijaya vittala

ವಿಜಯದಾಸ
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ
ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಪ

ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ
ವರ ಪೋತರಾಜಾ ಬೊಮ್ಮೆಯನು
ಬೀರೆದೇವರು ಹಾದಿಬೀದಿಯ ಬಸವಣ್ಣ
ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ 1

ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ
ಹಳ್ಳದ ತೀರದ ಹಾಳದೇವಿ ಅಮ್ಮ
ಜಲದೇವಿ ಜಕ್ಕಮ್ಮನೆಂತೆನಲು
ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ 2

ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ
ವನಶಕ್ತಿ ಚವಡಮ್ಮ ಜವನಿಕೆ
ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ
ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ 3

ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ
ಮುಂಡೆ ಮೂಕಾರುತಿ ಬೆಂಚೆಮ್ಮನು
ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ
ಹಿರಚು ಗುಂಪಿನ ಬಳಗ ಕಂಡರೇನಿಲ್ಲ 4

ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ
ಅನ್ಯದೇವತೆಗಳ ಭಜನೆ ಹೊಲ್ಲ
ಸಿರಿ ವಿಜಯವಿಠ್ಠಲನ ಯುಗಳಪಾದ
ಸನ್ನುತಿಸಿದರೆ ಪರಮ ಪದವಿಯಮ್ಮ 5
***

pallavi

salladO salladO sarvaru kELI namma phullanAbhana biTTu khulla dEvara pUje

caraNam 1

mArimasaNi jeTTi jeTTIngabEtALa vara pOtarAjA bommayanu
bIrE dyAvaru hAdi bIdiya basavaNNa cAru deiva uccAravallade holla

caraNam 2

yellammA yakanAti aDaviyagiDadamma haLLada tIrada hALadEvi amma
jaladEvi jakkammanentenalu sollubaride vyarthavillade phalavilla

caraNam 3

banadashankari kuLLahaTTige karimATe vana shakti cavaDammanu javanike
binagu mALAdEvi mALige hiriyakka ghana pisAcigaLind ondiSTu sukhavilla

caraNam 4

khaNDErAyA mala kaccina gadigemma muNDe mUkAruti ceNDemmanu
bhANDArada durgi hiriyeNN mayilAra hiNDugumpina baLaga kaNDarEnilla

caraNam 5

suNNada kesaru hAlu kUDi kuDidanta anya dEvategaLa bhajane hollA
cennAgi siri vijayaviThalanu yugaLa pAda sannutisidare parama padaviyakku
***