Showing posts with label ಅಂಜಬೇಡ ಬೇಡಲೊ ಜೀವ ಭವ purandara vittala. Show all posts
Showing posts with label ಅಂಜಬೇಡ ಬೇಡಲೊ ಜೀವ ಭವ purandara vittala. Show all posts

Friday, 6 December 2019

ಅಂಜಬೇಡ ಬೇಡಲೊ ಜೀವ ಭವ purandara vittala

( ರಾಗ ರೇಗುಪ್ತಿ. ಝಂಪೆ ತಾಳ)

ಅಂಜಬೇಡ ಬೇಡಲೊ ಜೀವ ಭವ
ಭಂಜನ ಹರಿ ಶರಣರ ಕಾವ ||ಪ||

ಬಂದ ಕಷ್ಟಗಳೆಲ್ಲ ತಾಳಿಕೋ, ಬಲು
ಸಂದೇಹ ಬಂದಲ್ಲಿ ಕೇಳಿಕೋ
ನಿಂದಾಸ್ತುತಿಗಳ ತಾಳಿಕೋ, ಗೋ-
ವಿಂದ ನಮ್ಮವನೆಂದು ಹೇಳಿಕೋ||

ಮಾಧವನಿಗೆ ತನು ಮನ ಮೆಚ್ಚು
ಕ್ರೋಧ ರೂಪದ ಮಾಯಿಗಳ ಕಚ್ಚು
ಮೋದತೀರ್ಥರ ಪಾದವೆ ಹೆಚ್ಚು, ಮಾಯಾ-
ವಾದಿ ಮತಕ್ಕೆ ಬೆಂಕಿಯ ಹಚ್ಚು ||

ಪರ ನಾರಿಯರ ಆಸೆಯ ಬಿಡು, ನೀನು
ಪರಮಾತ್ಮನ ಧ್ಯಾನವ ಮಾಡು
ಹರಿ ಸರ್ವೋತ್ತಮನೆಂದು ಕೊಂಡಾಡು, ವರದ-
ಪುರಂದರವಿಠಲನ ಮೂರ್ತಿಯ ನೋಡು ||
***

pallavi

anjabEDa bEDalo jIva bhava bhanjana hari sharaNara kAva

caraNam 1

banda kaSTagaLella tALikO balu sandEha bandalli kELikO
nindAstutigaLa tALikO gOvinda nammavanendu hELikO

caraNam 2

mAdhavanige tanu mana meccu krOdha rUpada mAyigaLa kaccu
mOdatIrttara pAdave heccu mAy vAdi matakke benkiya haccu

caraNam 3

para nAriyra Aseya biDu nInu paramAtmana dhyAnava mADu
hari sarvOttamanendu koNDADu varada purandara viTTalana mUrtiya nODu
***


ಅಂಜಬೇಡ ಬೇಡವೆಲೆ ಜೀವ -ಭವ - |
ಭಂಜನ ಹರಿಶರಣರ ತಾವ ಪ.

ಬಂದಷ್ಟರಿಂದಲಿ ಬಾಳಿಕೊ - ಬಲು - |
ಸಂದೇಹಬಂದಲ್ಲಿ ಕೇಳಿಕೊ ||
ನಿಂದಾ - ಸ್ತುತಿಗಳನು ತಾಳಿಕೊ - ಗೋ - |
ವಿಂದ ನಿನ್ನವನೆಂದು ಹೇಳಿಕೊ 1

ಮಾಧವನಿಗೆ ತನುಮನ ಮೆಚ್ಚು - ಕಾಮ - |
ಕ್ರೋಧಾದಿಗಳಕಲಿಮಲ ಕೊಚ್ಚು ||
ಮೋದತೀರ್ಥವಚನವೆ ಹೆಚ್ಚು -
ಮಾಯಾವಾದಿಮತೆಕೆ ಬೆಂಕಿಯ ಹಚ್ಚು 2

ಪರವನಿತೆಯ ರಾಶಿಯ ಬಿಡು - 
ನೀಹರಿಸರ್ವೋತ್ತಮನೆಂದು ಕೊಂಡಾಡು ||
ಪರಮಾತ್ಮನ ಧ್ಯಾನವಮಾಡು - ನಮ್ಮ - |
ಸಿರಿಪುರಂದರವಿಠಲನ ನೀನೋಡು3
***