..
kruti by pradyumna teertha ಪ್ರದ್ಯುಮ್ನತೀರ್ಥರು
ಬೇಡಿಕೊಂಬೆ ಮೃಡಹರ ಭವ ಶಂಭೋ ಪ
ಬೇಡಿಕೊಂಬೆ ನಿನ್ನಡಿಗಳಿಗೆರಗಿ ನಾ
ಕಡಲ ಕುವರಿಯ ಒಡೆಯನಲಿ ಮನ ಅ.ಪ
ಮನಕಾರಣವಲ್ಲವೊ ಅನಲಾಕ್ಷನೇ
ಹೀನ ಸುಕರ್ಮಕೆ ಪ್ರೇರಣೆ ಹೊರತು 1
ಮೃತ್ಯುಂಜಯ ಮುಪ್ಪುರಹರ ದೇವನೆ
ಅತ್ಯಪರಾಧಗಳೆತ್ತೆಣಿಸದಿರೈ 2
ಶ್ರೀ ನರಹರಿಯಾಸುತನ ಕುವರನೇ
ಅನುದಿನದಲಿ ಮನ ದೋಷಗಳಳಿಯ್ಯೆ 3
***