ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತು ಸವಿಯೋ ಅವರ ಮಾತು ಸವಿಯೋ ಮಾತಿಲಾತ್ಮಾನುಭವದ ಸ್ಥಿತಿಯಗೂಡಿಸುವರ ಪ
ನಿತ್ಯಾನಿತ್ಯದಿತ್ಯರ್ಥದ ತತ್ವಾರ್ಥಸಾರಾಯ ಬೀರಿ ಸತ್ಯ ಸನಾತನದ ಸುಪಥವಗೂಡಿಸುವರ 1
ಚಿತ್ತ ಶುದ್ದವನೆ ಮಾಡಿ ಮತ್ತವಾದ ಪರಬ್ರಹ್ಮಯ ಎತ್ತ ನೋಡಿದರತ್ತ ಪ್ರತ್ಯಕ್ಷ ತೋರಿಸುವರ 2
ಸ್ವಾನುಭವಾಮೃತವನು ಙÁ್ಞನಾಂಜನದುಲುಣಿಸಿ ತಾನೆ ತಾನಾದ ದೀನ ಮಹಿಪತಿ ಸ್ವಾಮಿಯ 3
***