Showing posts with label ಶೃಂಗಾರವಾಗಿದೆ ಸಿರಿರಂಗನ ಮಂಚ purandara vittala SHRUNGARAVAGIDE SIRI RANGANA MANCHA. Show all posts
Showing posts with label ಶೃಂಗಾರವಾಗಿದೆ ಸಿರಿರಂಗನ ಮಂಚ purandara vittala SHRUNGARAVAGIDE SIRI RANGANA MANCHA. Show all posts

Monday, 6 December 2021

ಶೃಂಗಾರವಾಗಿದೆ ಸಿರಿರಂಗನ ಮಂಚ purandara vittala SHRUNGARAVAGIDE SIRI RANGANA MANCHA



RESTART MOBILE IF AUDIO IS NOT PLAYING  CLICK-> HOME

or just scroll down for other devaranama 

ಶೃಂಗಾರವಾಗಿದೆ ಸಿರಿರಂಗನ ಮಂಚ
ಅಂಗನೆಮಹಲಕುಮಿಯರಸ ಮಲಗುವ ಮಂಚ ಪ

ಬಡಿಗ ಮುಟ್ಟದ ಮಂಚ | 
ಮಡುವಿನೊಳಿಹ ಮಂಚ |
ಮೃಡನ ತೋಳಲಿ ನೆಲಸಿಹ ಮಂಚ ||
ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |
ಕಡಲ ಶಯನ ಶ್ರೀ ರಂಗನ ಮಂಚ 1

ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |
ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||
ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |
ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2

ಕಾಲಿಲ್ಲದೋಡುವ ಮಂಚ | 
ಗಾಳಿ ನುಂಗುವ ಮಂಚ |
ನಾಲಗೆಯೆರಡುಳ್ಳ ವಿಷದ ಮಂಚ ||
ಏಳು ಹೆಡೆಯ ಮಂಚ | 
ಮೂಲೋಕದೊಡೆಯನ ಮಂಚ |
ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3

ಹಕ್ಕಿಗೆ ಹಗೆಯಾದ ಮಂಚ | 
ರೊಕ್ಕ ಮುಟ್ಟದ ಮಂಚ |
ರಕ್ಕಸರೆದೆದಲ್ಲಣನ ಮಂಚ ||
ಸೊಕ್ಕು ಪಿಡಿದ ಮಂಚ | 
ಘಕ್ಕನೆ ಪೋಗುವ ಮಂಚ |
ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4

ಅಂಕುಡೊಂಕಿನ ಮಂಚ | 
ಅಕಲಂಕ ಮಹಿಮ ಮಂಚ |
ಸಂಕರುಕ್ಷಣನೆಂಬ ಸುಖದ ಮಂಚ |
ಶಂಕರನ ಕೊರಳಿಗೆ ಪದಕವಾಗಿಹ ಮಂಚ |
ವೆಂಕಟಪುರಂದರವಿಠಲ ರಾಯನ ಮಂಚ5
***

Pallavi
Śr̥ṅgāravāgide siriraṅgana mañca |
aṅganemahalakumiyarasa malaguva mañca ||

Charaṇa 1
Baḍiga muṭṭada mañca | maḍuvinoḷiha mañca |
mr̥ḍana tōḷali nelesiha mañca ||
heḍeyuḷḷa hosamañca poḍavi hottiha mañca |
kaḍala śayana śrī raṅgana mañca ||

Charaṇa 2
Kaṇṇu-mūgina mañca bennu bāgida mañca |
huṇṇimeya candramana aḍḍagaṭṭuva mañca ||
baṇṇa biḷupina mañca honnu kādiha mañca |
cenniga parīkṣītana prāṇavakonḍamañca ||

Charaṇa 3
Kālilladōḍuva mañca | gāḷi nuṅguva mañca |
nālageyeraḍuḷḷa viṣada mañca ||
ēḷu heḍeya mañca | mūlōkadoḍeyana mañca |
kāḷagadali kirīṭiya mukuṭakonḍamañca ||

Charaṇa 4
Hakkige hageyāda mañca | rokka muṭṭada mañca |
rakkasarededallaṇana mañca ||
sokku piḍida mañca | ghakkane pōguva mañca |
lakkumi ramaṇa śrī hariya mañca ||

Charaṇa 5
Aṅkuḍoṅkina mañca | akalaṅka mahima mañca |
saṅkarukṣaṇanemba sukhada mañca |
śaṅkarana koraḷige padakavāgiha mañca |
veṅkaṭapurandaraviṭhala rāyana mañca ||
***

Pronunciation Guide
Long Vowels: Vowels with macrons (ā, ē, ī, ō, ū) are long (hold for two beats).
Retroflexes: For ḷ, ṇ, ḍ, ṭ, curl the tongue back to the roof of the mouth (e.g., mañca, heḍe).
Aspiration: Add a soft breath for bh, dh, th (e.g., mahimā, viṣada).
The 'ñ': The ñ in mañca is a nasal sound like "ny" in "canyon."
***

ಶ್ರೀ ಪುರಂದರದಾಸರ (ಅಂಕಿತ: ಪುರಂದರವಿಠಲ) ಈ ಕೃತಿಯು ಭಗವಂತನ ಶಯನವಾದ 'ಆದಿಶೇಷ'ನನ್ನು (ಸರ್ಪ) ಒಂದು ಅದ್ಭುತವಾದ ಮಂಚಕ್ಕೆ ಹೋಲಿಸಿ ವರ್ಣಿಸುವ ರೂಪಕ ಅಲಂಕಾರದ ಸುಂದರ ರಚನೆಯಾಗಿದೆ.

ಸಾರಾಂಶ (Summary)
ಈ ಹಾಡಿನಲ್ಲಿ ದಾಸರು ಆದಿಶೇಷನನ್ನು ಮಹಾಲಕ್ಷ್ಮಿಯ ಪತಿಯಾದ ಶ್ರೀರಂಗನು ಮಲಗುವ 'ಶೃಂಗಾರ ಮಂಚ' ಎಂದು ವರ್ಣಿಸಿದ್ದಾರೆ. ಈ ಮಂಚವು ಸಾಮಾನ್ಯ ಬಡಿಗನಿಂದ ಮಾಡಲ್ಪಟ್ಟಿದ್ದಲ್ಲ; ಇದು ಸಮುದ್ರದ ಮಧ್ಯದಲ್ಲಿದೆ, ಶಿವನ ಕೊರಳಲ್ಲಿ ಹಾರವಾಗಿದೆ, ಮತ್ತು ಭೂಮಿಯ ಭಾರವನ್ನು ಹೊತ್ತಿದೆ. ಏಳು ಹೆಡೆಗಳುಳ್ಳ, ಎರಡು ನಾಲಗೆಗಳುಳ್ಳ ಈ ವಿಶಿಷ್ಟ ಮಂಚವು ಭಗವಂತನಿಗೆ ಅತ್ಯಂತ ಸುಖವಾದ ಶಯನವಾಗಿದೆ. ಆದಿಶೇಷನ ವಿವಿಧ ರೂಪಗಳು ಮತ್ತು ಲೀಲೆಗಳನ್ನು ದಾಸರು ಈ ಕೃತಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

 ಭಾವಾರ್ಥ (Paragraph-wise Meaning)
ಪಲ್ಲವಿ:

ಶೃಂಗಾರವಾಗಿದೆ ಸಿರಿರಂಗನ ಮಂಚ |
ಅಂಗನೆಮಹಲಕುಮಿಯರಸ ಮಲಗುವ ಮಂಚ ||

ಅರ್ಥ: ಮಹಾಲಕ್ಷ್ಮಿಯ ಅರಸನಾದ ಶ್ರೀರಂಗನು ಮಲಗುವ ಈ ಮಂಚವು ಅತ್ಯಂತ ಸುಂದರವಾಗಿದೆ ಮತ್ತು ಶೃಂಗಾರಮಯವಾಗಿದೆ. ಇದು ಕೇವಲ ಮಂಚವಲ್ಲ, ಸಾಕ್ಷಾತ್ ಆದಿಶೇಷನೇ ಮಂಚದ ರೂಪದಲ್ಲಿ ಭಗವಂತನಿಗೆ ಸೇವೆಯನ್ನು ಸಲ್ಲಿಸುತ್ತಿದ್ದಾನೆ.

ಚರಣ ೧:

ಬಡಿಗ ಮುಟ್ಟದ ಮಂಚ ಮಡುವಿನೊಳಿಹ ಮಂಚ ಮೃಡನ ತೋಳಲಿ ನೆಲಸಿಹ ಮಂಚ |
ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ ಕಡಲ ಶಯನ ಶ್ರೀ ರಂಗನ ಮಂಚ || 1 ||

ಅರ್ಥ: ಈ ಮಂಚವನ್ನು ಯಾವ ಬಡಿಗನೂ (Carpenter) ಮರದಿಂದ ತಯಾರಿಸಿಲ್ಲ. ಇದು ಸಮುದ್ರದ (ಮಡು) ಮಧ್ಯದಲ್ಲಿ ವಾಸಿಸುತ್ತದೆ. ಶಿವನ (ಮೃಡ) ತೋಳುಗಳಿಗೆ ಇದು ಆಭರಣವಾಗಿದೆ. ಹೆಡೆಗಳನ್ನು ಹೊಂದಿರುವ ಈ ಮಂಚವು ಇಡೀ ಭೂಮಿಯನ್ನೇ (ಪೊಡವಿ) ಹೊತ್ತಿದೆ. ಸಮುದ್ರದಲ್ಲಿ ಮಲಗುವ ಶ್ರೀರಂಗನಿಗೆ ಇದು ಶಾಶ್ವತ ಶಯನ.

ಚರಣ ೨:

ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ |
ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡ ಮಂಚ || 2 ||

ಅರ್ಥ: ಈ ಮಂಚಕ್ಕೆ ಜೀವಂತ ಕಣ್ಣು ಮತ್ತು ಮೂಗುಗಳಿವೆ, ಹಾವು ಹರಿಯುವಾಗ ಬೆನ್ನು ಬಾಗಿದಂತೆ ಈ ಮಂಚವು ಇದೆ. ಇದರ ಹೊಳಪು ಹುಣ್ಣಿಮೆಯ ಚಂದ್ರನನ್ನೂ ಮೀರಿಸುವಂತಿದೆ. ಬಿಳಿ ಬಣ್ಣದ ಈ ಮಂಚವು ಭಗವಂತನೆಂಬ ಚಿನ್ನವನ್ನು ಕಾಯುತ್ತಿರುವಂತಿದೆ. ಹಿಂದೆ ತಕ್ಷಕನ ರೂಪದಲ್ಲಿ ಬಂದು ಪರೀಕ್ಷಿತ ಮಹಾರಾಜನ ಪ್ರಾಣವನ್ನು ಪಡೆದದ್ದೂ ಈ ಮಂಚವೇ (ಆದಿಶೇಷನ ಅಂಶ).

ಚರಣ ೩:

ಕಾಲಿಲ್ಲದೋಡುವ ಮಂಚ ಗಾಳಿ ನುಂಗುವ ಮಂಚ ನಾಲಗೆಯೆರಡುಳ್ಳ ವಿಷದ ಮಂಚ |
ಏಳು ಹೆಡೆಯ ಮಂಚ ಮೂಲೋಕದೊಡೆಯನ ಮಂಚ ಕಾಳಗದಲಿ ಕಿರೀಟಿಯ ಮುಕುಟಕೊಂಡ ಮಂಚ || 3 ||

ಅರ್ಥ: ಈ ಮಂಚಕ್ಕೆ ಕಾಲುಗಳಿಲ್ಲದಿದ್ದರೂ ವೇಗವಾಗಿ ಓಡಬಲ್ಲದು. ಇದು ಗಾಳಿಯನ್ನೇ ಆಹಾರವಾಗಿ ಸೇವಿಸುತ್ತದೆ ಮತ್ತು ಎರಡು ನಾಲಗೆಗಳನ್ನು ಹೊಂದಿರುವ ವಿಷದ ಮಂಚವಾಗಿದೆ. ಏಳು ಹೆಡೆಗಳಿರುವ ಈ ಮಂಚವು ಮೂರು ಲೋಕದ ಒಡೆಯನಿಗೆ ಆಸರೆಯಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನು ಸರ್ಪಾಸ್ತ್ರವನ್ನು ಬಿಟ್ಟಾಗ ಅರ್ಜುನನ (ಕಿರೀಟಿ) ಕಿರೀಟವನ್ನು ಹಾರಿಸಿದ್ದು ಇದೇ ಮಂಚದ ಅಂಶ.

ಚರಣ ೪:

ಹಕ್ಕಿಗೆ ಹಗೆಯಾದ ಮಂಚ ರೊಕ್ಕ ಮುಟ್ಟದ ಮಂಚ ರಕ್ಕಸರೆದೆದಲ್ಲಣನ ಮಂಚ |
ಸೊಕ್ಕು ಪಿಡಿದ ಮಂಚ ಘಕ್ಕನೆ ಪೋಗುವ ಮಂಚ ಲಕ್ಕುಮಿ ರಮಣ ಶ್ರೀ ಹರಿಯ ಮಂಚ || 4 ||

ಅರ್ಥ: ಗರುಡನಿಗೆ (ಹಕ್ಕಿ) ಹಗೆಯಾದ ಈ ಮಂಚವು, ಹಣದಿಂದ (ರೊಕ್ಕ) ಕೊಳ್ಳಲು ಸಾಧ್ಯವಿಲ್ಲದ ಅಮೂಲ್ಯವಾದದ್ದು. ಇದು ರಾಕ್ಷಸರ ಎದೆಯಲ್ಲಿ ಭಯವನ್ನು ಹುಟ್ಟಿಸುತ್ತದೆ. ತನ್ನದೇ ಆದ ವೈಭವದ ಸೊಕ್ಕಿನಿಂದ ಕೂಡಿದ ಈ ಮಂಚವು ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಲ್ಲದು. ಲಕ್ಷ್ಮೀರಮಣನಾದ ಶ್ರೀಹರಿಯು ಇದರ ಮೇಲೆ ಸುಖವಾಗಿ ವಿಶ್ರಮಿಸುತ್ತಾನೆ.

ಚರಣ ೫:

ಅಂಕುಡೊಂಕಿನ ಮಂಚ ಅಕಲಂಕ ಮಹಿಮ ಮಂಚ ಸಂಕರುಕ್ಷಣನೆಂಬ ಸುಖದ ಮಂಚ |
ಶಂಕರನ ಕೊರಳಿಗೆ ಪದಕವಾಗಿಹ ಮಂಚ ವೆಂಕಟಪುರಂದರವಿಠಲ ರಾಯನ ಮಂಚ || 5 ||

ಅರ್ಥ: ಹಾವಿನ ನಡಿಗೆಯಂತೆ ಅಂಕುಡೊಂಕಾಗಿರುವ ಈ ಮಂಚವು ಕಳಂಕವಿಲ್ಲದ ಮಹಿಮೆಯನ್ನು ಹೊಂದಿದೆ. ಇದನ್ನು ಸಂಕರ್ಷಣನೆಂದೂ ಕರೆಯುತ್ತಾರೆ; ಇದು ಭಗವಂತನಿಗೆ ಸುಖವನ್ನು ನೀಡುವ ಮಂಚ. ಶಂಕರನ ಕೊರಳಿಗೆ ಪದಕದಂತೆ ಶೋಭಿಸುವ ಈ ಮಂಚವು, ವೆಂಕಟಪುರಂದರವಿಠಲನಾದ ಶ್ರೀಹರಿಯ ದಿವ್ಯ ಶಯನವಾಗಿದೆ.
***

English Meaning
Summary: This unique composition by Purandara Dasa uses the metaphor of a "decorated cot" (Mancha) to describe Adi Shesha, the divine serpent upon whom Lord Vishnu reclines. The poet explains that this is no ordinary furniture—it wasn't made by a carpenter, it eats air, has no legs yet moves fast, and carries the weight of the entire universe. It serves as an ornament for Shiva and a bed for the Lord of the three worlds.


Stanza-wise Meaning:

Pallavi: The cot of Lord Ranganatha is beautifully decorated. It is the resting place of the consort of Goddess Lakshmi.

Stanza 1: No carpenter has ever touched this cot. It resides in the deep waters and serves as an ornament on the arms of Lord Shiva. This hooded cot bears the weight of the entire world.

Stanza 2: A cot with living eyes and nose, it has a curved back. Its brilliance surpasses the full moon. This white cot guards the "gold" (the Lord). In another form, it was the one that took the life of King Parikshit.

Stanza 3: It moves without legs and feeds on air. It has two tongues and is filled with venom. This seven-hooded cot belongs to the Lord of the three worlds. During the great war, it was responsible for striking Arjuna's crown.

Stanza 4: It is the natural enemy of the bird (Garuda). It cannot be bought with money. It strikes terror into the hearts of demons. It moves swiftly and serves as the bed for Lord Hari.

Stanza 5: It moves in zig-zags and possesses spotless glory. Known as Sankarshana, it provides supreme comfort to the Lord. It hangs like a pendant around Lord Shankara's neck and belongs to Lord Venkata Purandara Vittala.
***



pallavi

shrngAravAgide siri rangana manca angane mahalakumyarasa malaguva manca

caraNam 1

baDiga muTTida manca maDuvinoLiha manca mrDana tOLali nelasiha manca
heDeyuLLa hosa manca poDavi hottiha manca kaDal;a shayana shrIrangana manca

caraNam 2

kaNNu kiviyAda manca bennu bAgida manca huNNimeya candramana aDDa gaTTuva manca
baNNa biLupina manca honnu kAdiha manca cenniga parIkSitana prANava koNDa manca

caraNam 3

kAliila tODuva manca kALi nunguva manca nAlage eraDuLLa viSada manca
Ezhu hedeya manca mUlOkadoDeyana manca kALagadali kirITiya mukuTa koNDa manca

caraNam 4

hakkige hageyAda manca rokka muTTda manca rakkasarade dallaNana manca
sokku pIDida manca bakkane pOguva manca lakkumi ramaNa shrI hariya manca

caraNam 5

anku Donkina manca akalanka mahima manca san-karuSANanemba sugada manca
shankarana koraLige padakavAgiha manca venkaTa purandara viTTalarAyana manca
***

ರಾಗ ಬಿಲಹರಿ ಅಟತಾಳ

ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ||

ಅಂಗನೆ ರುಕ್ಮಿಣಿಯರಸನಾ ಮಂಚ ||ಅ||

ಬಡಗಿ ಮುಟ್ಟದ ಮಂಚ ಮಡುವಿನೊಳಿಹ ಮಂಚ
ಮೃಡನ ತೋಳಲಿ ನೆಲಸಿಹ ಮಂಚ ಸಡಗರವುಳ್ಳ ಮಂಚ
ಹೆಡೆಯುಳ್ಳ ಹೊಸ ಮಂಚ
ಪೊಡವಿಗೊಡೆಯ ಪಾಂಡುರಂಗನ ಮಂಚ ||

ಕಾಲಿಲ್ಲದಿಹ ಮಂಚ ಗಾಳಿ ನುಂಗುವ ಮಂಚ
ತೋಳು ಬಿಳುಪಿನ ಮಂಚ ವಿಷದ ಮಂಚ
ಕಾಳಗದೊಳರ್ಜುನನ ಮುಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೊಂದುದೀ ಮಂಚ ||

ಕಣ್ಣು ಕಿವಿಯಾದ ಮಂಚ ಬಣ್ಣ ಬಿಳುಪಿನ ಮಂಚ
ಹೊನ್ನ  ಪೆಟ್ಟಿಗೆಯೊಳಗೆ ಅಡಗುವ ಮಂಚ
ಹುಣ್ಣಿಮೆಯ ಚಂದ್ರಮನ ಬಣ್ಣಕೆಡಿಸಿದ(/ಅಡ್ಡಗಟ್ಟುವ ) ಮಂಚ
ಕನ್ನೆ ಮಹಾಲಕ್ಷ್ಮಿಯರಸನ ಮಂಚ ||

ಹಕ್ಕಿಗೆ ಹಗೆ ಮಂಚ ರೊಕ್ಕ ಮುಕ್ಕದ ಮಂಚ
ರಕ್ಕಸರದೆತಲ್ಲಣನ ಮಂಚ ಸಿಕ್ಕಿಲ್ಲದೀ ಮಂಚ
ಶ್ರೀ ಲಕ್ಷ್ಮೀಪತಿ ಮಂಚ
ಪೊಡವಿಗೊಡೆಯ ಪಾಂಡುರಂಗನ ಮಂಚ ||

ಅಂಕುಡೊಂಕಿನ ಮಂಚ ಅನಂತಕಾಲಿನ ಮಂಚ
ಶಂಕರನ ತೋಳಿಗೆ ಪದಕದ ಮಂಚ
ಶಂಕೆಯೊಳಸುರರ ಸಂಹರಿಸಿದ ಮಂಚ
ಪಂಕಜಾಕ್ಷ ಮುಕುಂದ ಪವಡಿಪ ಮಂಚ ||

ಹುತ್ತದೊಳಿಹ ಮಂಚ ಧರೆಯ ಪೊತ್ತಿಹ ಮಂಚ
ಹೆತ್ತ ಮಕ್ಕಳಿಗೆ ಹೆಸರಿಡುವ ಮಂಚ
ಹತ್ತಬಾರದ ಮಂಚ ಹತ್ತಲೀಸದ ಮಂಚ
ಚಿತ್ತಜಪಿತ ತಾನು ಪವಡಿಪ ಮಂಚ ||

ಏಳು ಹೆಡೆಯುಳ್ಳ ಮಂಚ ಬಹಳ ಮೃದುವಿನ ಮಂಚ
ಧ್ಯಾನಮಾತ್ರದಿ ನಾರದಂಗೊಲಿದ ಮಂಚ
ನಾರಾಯಣನ ಮಂಚ ಶ್ರೀಲಕ್ಷ್ಮೀಪತಿ ಮಂಚ ಸ್ವಾಮಿ
ಶ್ರೀಪುರಂದರವಿಠಲನ ಮಂಚ ||
***