Showing posts with label ಇಂದು ಎನಗೆ ಗೋವಿಂದ ನಿನ್ನಯ ಪಾದಾರ dheeravenugopala INDU ENAGE GOVINDA PAADAARA. Show all posts
Showing posts with label ಇಂದು ಎನಗೆ ಗೋವಿಂದ ನಿನ್ನಯ ಪಾದಾರ dheeravenugopala INDU ENAGE GOVINDA PAADAARA. Show all posts

Friday 27 December 2019

ಇಂದು ಎನಗೆ ಗೋವಿಂದ ನಿನ್ನಯ ಪಾದಾರ ankita dheeravenugopala INDU ENAGE GOVINDA PAADAARA



On Krishna
by raghavendra swamy
ರಾಗ – ಭೈರವಿ  ತ್ರಿಪುಟತಾಳ (raga tala may differ in audio)

ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವ ತೋರೋ ಮುಕುಂದನೇ || ಪ ||

ಸುಂದರವದನನೇ ನಂದಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರೆರಮಣ || ಅ.ಪ ||

ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನೆಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪಜನಕನೇ || ೧ ||

ಮೂಢತನದಿ ಬಲು ಹೇಡಿಜೀವ ನಾನಾಗಿ
ದೃಢ ಭಕುತಿಯನ್ನು ಮಾಡಲಿಲ್ಲವೋ ಹರಿಯೆ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ || ೨ ||

ಧಾರುಣಿಯೊಳು ಬಲು ಭಾರ ಜೀವನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೋ ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ || ೩ ||
***

Indu Enage Govinda ninna padaara
Vindava tOrO mukundane

Sundara vadanane nandaGopana Kanda
mandarOdhara aananda indiara ramaNa

nondenayya naa bhavabandhanadoLu saluki
munde daari kaaNade kundide jagadoLu
kandanamtendenna kundugaLeNisade
tande kayo Krishna kandarpa janakane

mUDhatanadi balu hEDijIvananaagi
dRuDhabhakutiyanu maadalillavo hariyE
nODalillavo ninna paaDalillavo mahime
gaaDikaara Krishba bEDikombeno ninna

dhaaruNiloLu bhUbhaara jIvananaagi
daari tappi naDede sEride kujanara
aaru kaayuvavarilla sEride ninagayya
dhIra vENugOpala paarugaaNiso hariye
***

Indu Enage Govinda ninna padaara
Vindava tOrO mukundane

Sundara vadanane nandaGopana Kanda
mandarOdhara aananda indiara ramaNa

nondenayya naa bhavabandhanadoLu saluki
munde daari kaaNade kundide jagadoLu
kandanamtendenna kundugaLeNisade
tande kayo Krishna kandarpa janakane

mUDhatanadi balu hEDijIvananaagi
dRuDhabhakutiyanu maadalillavo hariyE
nODalillavo ninna paaDalillavo mahime
gaaDikaara Krishba bEDikombeno ninna

dhaaruNiloLu bhUbhaara jIvananaagi
daari tappi naDede sEride kujanara
aaru kaayuvavarilla sEride ninagayya
dhIra vENugOpala paarugaaNiso hariye
***

ಇಂದು ಎನಗೆ ಶ್ರೀ ಗೋವಿಂದ
ನಿನ್ನಯ ಪಾದರವಿಂದವ ತೋರೋ ಮುಕುಂದ ಇಂದಿರಾ ರಮಣ

ಸುಂದರ ವದನನೆ ನಂದ ಗೋಪನ ಕಂದ
ಮಂದರೊದ್ಧಾರ ಆನಂದ ಇಂದಿರಾ ರಮಣ

ನೋಂದೆನಯ್ಯ ನಾ ಭವ ಬಂಧನದೊಳು ಸಿಲುಕಿ
ಮುಂದೆ ದಾರಿಗಾಣದೆ ಕುಂದಿದೆ ಜಗದೊಳು
ಕಂದನೆಂದೆನ್ನಯ ಕುಂದುಗಳೆನಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ

ಮೂಢತನದಿ ಬಲು ಹೇಡಿಜೀವನನಾಗಿ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ

ಧಾರುಣಿಯೊಳು ಭೂಭಾರ ಭಾಜನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರು ಕಾಯುವರಿಲ್ಲ ಸೇರಿದೆ ನಿನಗಯ್ಯ

ಧೀರ ವೇಣುಗೋಪಾಲ ಪಾರು ಗಾಣಿಸೋ ಎನ್ನ
****

 ರಾಗ : ಭೈರವಿ  ತಾಳ : ರೂಪಕ
ಇಂದು ಯೆನಗೆ ಗೋ-
ವಿಂದ ನಿನ್ನಯ । ಪಾದಾರ ।
ವಿಂದವ ತೋರೋ ಮುಕುಂದನೇ ।
ಸುಂದರ ವದನನೇ -
ನಂದ ಗೋಪಿಯ ಕಂದ ।
ಮಂದರೋದ್ಧಾರ ಆನಂದ -
ಇಂದಿರಾ ರಮಣ ।। ಪಲ್ಲವಿ ।।
ನೊಂದೇನಯ್ಯಾ ಭವ -
ಬಂಧನದೊಳು ಸಿಲುಕಿ ।
ಮುಂದೆ ದಾರಿ ಕಾಣದೆ -
ಕುಂದಿದೆ ಜಗದೊಳು ।
ಕಂದನೆಂತೆಂದೆನ್ನ -
ಕುಂದುಗಳೆಣಿಸದೆ ।
ತಂದೆ ಕಾಯೋ ಕೃಷ್ಣ -
ಕಂದರ್ಪ ಜನಕನೇ ।। ಚರಣ ।।
ಮೂಢತನದಿ ಬಲು -
ಹೇಡಿ ಜೀವನನಾಗಿ ।
ದೃಢ ಭಕುತಿಯನು -
ಮಾಡಲಿಲ್ಲವೋ ಹರಿಯೇ ।
ನೋಡಲಿಲ್ಲವೋ ನಿನ್ನ -
ಪಾಡಲಿಲ್ಲವೋ ಮಹಿಮೆ ।
ಗಾಡಿಕಾರ ಕೃಷ್ಣ -
ಬೇಡಿಕೊಂಬೆನೊ ನಿನ್ನ ।। ಚರಣ ।।
ಧಾರುಣಿಯೊಳು ಬಲು -
ಭಾರ ಜೀವನನಾಗಿ ।
ದಾರಿ ತಪ್ಪಿ ನಡೆದೆ -
ಸೇರಿದೆ ಕುಜನರ ।
ಆರೂ ಕಾಯುವರಿಲ್ಲ -
ಸಾರಿದೆ ನಿನಗಯ್ಯಾ ।
ಧೀರ ವೇಣುಗೋಪಾಲ -
ಪಾರುಗಾಣಿಸೋ ಹರಿಯೇ ।। ಚರಣ ।।
***

just scroll down for other devaranama