Showing posts with label ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ kamalanabha vittala. Show all posts
Showing posts with label ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ kamalanabha vittala. Show all posts

Thursday, 5 August 2021

ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ ankita kamalanabha vittala

 ..

kruti by Nidaguruki Jeevubai

ಗುರುರಾಯರ ಮಹಿಮೆ ಕೇಳಿರಿ ನಮ್ಮ

ಗುರುರಾಯರ ಮಹಿಮೆ ಪ


ಪರಮ ಭಕುತಿಯಿಂದ ಸ್ಮರಿಸುವ ಸುಜನರ

ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ ಅ.ಪ


ಇಂದಿರೇಶನ ಮಹಿಮೆ ಪೊಗಳುವ ಭಕ್ತ

ಸಂದಣಿ ಪೊರೆಯುವರ

ಹಿಂದಿನ ಅಘಗಳನೊಂದೂ ನೋಡದೆ ಶ್ರೀ-

ಮುಕುಂದನ ಭಜಕರ ಸಂಗಡ ನೀಡುವ ದಿವ್ಯ 1


ದೇಶ ದೇಶದೊಳಿವರ ಮಹಿಮೆಗಳ ಉ-

ಲ್ಲಾಸದಿ ಪೊಗಳುವರ

ದಾಸರೆಂತೆಂದು ಸಂತೋಷದಿ ಸೇವಿಪ

ಮೀಸಲ ಮನದವರ ಪೋಷಿಸುತಿರುವಂಥ 2

ಹಲವು ಸಾಧನವೇತಕೆ ತನುಮನವ ಶ್ರೀ-

ಹರಿಗೆ ಸಮರ್ಪಿಸಿರಲು

ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ

ಚರಣ ಸೇವಕರೆಂದು ಸಿರಬಾಗಿ ನುತಿಸಿರೊ 3


ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ-

ಮುದ್ರಾಧಾರಣ ಮಾಡಿಹ

ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ

ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ 4

ಕನಸುಮನಸಿನಲಿವರು ದರ್ಶನವಿತ್ತು

ಸವಿನಯ ತೋರುವರ

ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ5

***