..
ಕರೆದುತನ್ನಿರೊ ಕನ್ನಗಾರನ
ಹರಿಯ ಗುಣಗಳ ಕದ್ದ ಹಗಲುಗನ್ನಗಾರನ ಪ.
ರೂಪವಿಲ್ಲ ಗುಣ [ವಿಲ್ಲಾತನೆ] ಪರಬ್ರಹ್ಮನೆಂಬ
ಪಾಪಿಗನ್ನ ಕರೆದು ಮುಖಭಂಗಿತನ್ನ ಮಾಡಿರೊ 1
ಹರಿ ಇಲ್ಲ ಗುರುಇಲ್ಲ ಹರಿಹರರು ಒಂದು ಎಂಬೊ
ಶಿರಕೆ ಪಿತ್ತ ಅಡರಿದಂ[ಥ]ಮರುಳು ಮಾತುಗಾರ[ನೆ]
ವೇದಶಾಸ್ತ್ರ ಹುಸಿಯೆಂದು ಸಾಧುಜನರ ಕಾಡುತಿಹನು
[ಕಾದಿ]ತಮಸಿನೊಳಗೆ ಬಿದ್ದು ಕಾಣ ಹಯವದನನ್ನ 3
***