ಜಯತೀರ್ಥ ಗುರು ಹೃದ್ಗುಹಾಂತರವಾಸ ಪ
ವಾಯುವಂತರ್ಗತ ಕೃಷ್ಣಯ್ಯ ಜೀಯ್ಯ ಅ.ಪ
ಕಾಯಯ್ಯಇವ ನಿನ್ನವನೆಂದು ಅನುದಿನ
ಕಾಯ ವಾಚದಲಿ ನಿನ್ನ ನೆನವಿರಲಿ
ಜೀಯ ಶ್ರೀ ವಿಜಯರಾಯರ ಸೇವಾ
ಕಾರ್ಯಗಳಿಗಭಯವ ನೀಡಯ್ಯ 1
ಲೌಕಿಕದಲ್ಲಿಹನೆಂದು ನಿರಾಕರಿಸದಲೆ ನಿನ್ನ
ಏಕಾಂತ ಭಕ್ತಿಯನಿತ್ತು ಸಲಹೋ
ಶ್ರೀ ಕಳತ್ರನೆ ಇವನ ವ್ಯಾಕುಲವ ಹರಿಸಿ ಕೃ
ಪಾ ಕಟಾಕ್ಷದಿ ನೋಡಿ ಕಾಯಬೇಕಯ್ಯ 2
ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸೊ
ಭಕ್ತಿಬಲe್ಞÁನ ಸಾಧನವನಿತ್ತು
ಭಕ್ತವತ್ಸಲನೆಂಬೊ ಬಿರುದು ನಿನ್ನೊಳು ಇರಲಿ
ಮುಕುತರೊಡೆಯ ದೇವಾ ಶ್ರೀ ವೇಂಕಟೇಶ 3
****