Showing posts with label ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ shreeda vittala ENDU KAAMBENO NINNA HE SRINIVASA. Show all posts
Showing posts with label ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ shreeda vittala ENDU KAAMBENO NINNA HE SRINIVASA. Show all posts

Tuesday, 5 October 2021

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ankita shreeda vittala ENDU KAAMBENO NINNA HE SRINIVASA



kruti by Srida Vittala Dasaru  Karjagi Dasappa


ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ


ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ -

ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ

ಮುಂದೆ ಗತಿ ಏನಯ್ಯ ಮುಕುತರ

ಹಿಂದುಳಿದವನಲ್ಲದಲೆ ತನು ಸಂ -

ಬಂಧಿಗಳ ವಶನಾಗಿ ದುರ್ವಿಷ -

ಯಾಂಧಕಾರದಿ ಮುಳುಗಿದೆನೊ ನಾ ಅ.ಪ.


ಹಲವು ಜನ್ಮದ ನೋವಾ ನಾ

ಹೇಳಿಕೊಳಲೇನೆಲವೊ ದೇವರ ದೇವಾ ನೀ -

ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ

ಸುಲಭರೊಳಗತಿ ಸುಲಭನೆಂಬುವ

ಅಲವಬೋಧಮತಾನುಗರು ಎನ -

ಗೊಲಿದು ಪೇಳಲು ಕೇಳಿ ನಿಶ್ಚಂ -

ಚಲದಿ ನಿನ್ನನೆ ಧೇನಿಸುವೆ ನಾ

ಕಲುಷ ಸಂಸ್ಕಾರಗಳ ವಶದಿಂ

ಹೊಲಬುಗಾಣದೆ ಹರುಷಗುಂದುವೆ

ಹೊಲೆ ಮನದ ಹರಿದಾಟ ತಪ್ಪಿಸಿ

ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1


ಭಾರತೀಪತಿಪ್ರೀಯಾ ಎಂದೆಂದು ಭಕುತರ

ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ -

ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ

ತಾರಕನು ನೀನೆಂದು ತಿಳಿಯದ

ಕಾರಣದಿ ಸುಖ ದುಃಖಮಯ ಸಂ -

ಸಾರ ದುಸ್ತರ ಶರಧಿಯೊಳು ನಾ

ಪಾರಗಾಣದೆ ಪರಿದು ಪೋಪೆನೊ

ದೂರನೋಳ್ಪದು ಧರ್ಮವಲ್ಲವೊ

ದ್ವಾರಕಾಪುರನಿಲಯ ಪರಮೋ -

ದಾರ ತನುವೆಂದೆನ್ನ ಪಾಲಿಗೆ

ಬಾರದಲ್ಲದೆ ಭವವಿಮೋಚನ 2


ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ -

ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ -

ಸುಖಗುಣಾರ್ಣವ ಶ್ರೀದವಿಠಲಪ್ರಸೀದ

ಸಕಲ ಕ್ರಿಯ ಯೋಗಗಳು ತನು ಬಂ-

ಧಕವು ನಿನಗೊಪ್ಪಿಸದಿರಲು ಎನೆ

ನಿಖಿಳ ಜೀವರ ಭಿನ್ನ ನಿನ್ನಯ

ಯುಕುತಿಗೆ ನಮೊ ಎಂಬೆನಲ್ಲದೆ

ಯುಕುತ ಯುಕ್ತಿಗಳೊಂದರಿಯದ -

ರ್ಭಕನ ಬಿನ್ನಪ ಸಲಿಸಿ ನವವಿಧ

ಭಕುತಿ ಭಾಗ್ಯವ ಕೊಟ್ಟು ತವ ಸೇ -

ವಕರ ಸೇವಕನೆನಿಸದಿರ್ದೊಡೆ 3

***