Showing posts with label ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ramesha. Show all posts
Showing posts with label ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ramesha. Show all posts

Wednesday, 4 August 2021

ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ankita ramesha

.. 

ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ.

ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1

ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2

ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3

ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4

ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5

ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6

ಆನೆÉ ಅಂಬಾರಿ ಲಕ್ಷಏನೆಂಬೆ ಹಿಡಿದೇಜಿಭಾನು ಮಾನಿನಿ ಸಹಿತಾಗಿ ಸಖಿಯೆಭಾನು ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7

****''