Showing posts with label ದೇವರಲ್ಲೇ ಸಜ್ಜನವರವನಿ ಅಕುಲ ತನ್ನಂತಖಿಳದಿ ನೋಡುತಾ gurumahipati. Show all posts
Showing posts with label ದೇವರಲ್ಲೇ ಸಜ್ಜನವರವನಿ ಅಕುಲ ತನ್ನಂತಖಿಳದಿ ನೋಡುತಾ gurumahipati. Show all posts

Wednesday, 1 September 2021

ದೇವರಲ್ಲೇ ಸಜ್ಜನವರವನಿ ಅಕುಲ ತನ್ನಂತಖಿಳದಿ ನೋಡುತಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ದೇವರಲ್ಲೇ ಸಜ್ಜನವರವನಿ | ಪ 

ಅಕುಲ ತನ್ನಂತಖಿಳದಿ ನೋಡುತಾ | ಸಕಲರ ಹಿತದಲಿ ಪ್ರಕಟದಿ ಬಾಳುತಾ | ಮಕ ಮಾವುಗಳ ವಿಕಳರಿಯರು 1 

ಶಾಂತಿ ಶಮೆದಮೆದಾಂತಿ ತಿತಕ್ಷಾ | ಅಂತರ್ಬಹಿಯವಂತರು ಭಕ್ತಿಯ | ಪಂಥದಿ ನಡೆಯುತ ನಂತನ ಮೂರುತಿ | ಚಿಂತಿಸಿ ಮನ ವಿಶ್ರಾಂತಿಯಲಿಹರು 2 

ಅಣುಪರಿ ಸದ್ಗುಣ ಮನುಜನ ಕಂಡರ | ವನಪರ್ವತ ಸಮವೆನೆ ಕೊಂಡಾಡುವ | ತನುಮನ ವಚನದಿ ಘನ ಪುಣ್ಯಾಮೃತ | ಮನಿಗುರು ಮಹಿಪತಿ ತನು ಭವಗಂದಾ 3

***