*
ರಾಗ : ಪೂರ್ವಿ ತಾಳ : ಝ೦ಪೆ
ನಂಬಿದೆನು ನಿನ್ನ ಪಾದ-
ಲಂಬೋದರ ।
ಅಂಬರಾಧಿಪತಿ ಮನದ ।
ಹಂಬಲವ ನೀಡೆಂದು ।। ಪಲ್ಲವಿ ।।
ನಾಕನಾಥನುತ ಪಿನಾಕಿಸುತ ।
ಕಾಕುಮತಿಯ ಕಳೆದು ಕಾಯೋ ।
ಆಖು ವಾಹನ ಏಕದಂತ ।। ಚರಣ ।।
ಭದ್ರ ಮೂರುತಿಯೆ ಕರು-
ಣಾಬ್ಧಿ ತ್ವರಿತ ।
ಉದ್ಧರಿಸು ಎಂದು ನಮಿಪೆ ।
ಅದ್ರಿಜೆ ಕುಮಾರ ನಿರುತ ।। ಚರಣ ।।
ಸಿಂಧೂರ ವದನನೆ ಸುರ
ವೃಂದ ವಂದಿತ ।
ವಂದಿಸಿ ಬೇಡುವೆ ಶ್ಯಾಮ-
ಸುಂದರನ ಪ್ರೀತಿ ಪಾತ್ರ ।। ಚರಣ ।।
****
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಅಂಬರಾಧಿಪ = ಅಂತರಿಕ್ಷಾಭಿಮಾನಿಯಾದ ಶ್ರೀ ಗಣಪತಿ
ನಾಕನಾಥ = ಸ್ವರ್ಗ ಲೋಕದೊಡೆಯ ಶ್ರೀ ಇಂದ್ರದೇವರು
[ ನಾಕ = ಸ್ವರ್ಗ ಲೋಕ, ನಾಥ = ಒಡೆಯ ]
ಆದ್ರಿಜೆ ಕುಮಾರ = ಶ್ರೀ ಪಾರ್ವತೀ ಸುತ
ಸಿಂಧೂರ ವದನನೆ = ಗಜಮುಖನೆ
****