..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮಂಗಳಾರತಿಯನೆತ್ತೆರೆ ನಿತ್ಯ ಸು-
ಮಂಗಳೆಗತಿಶಯದಿ ಪ
ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ
ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ.
ಕಡಲೊಳು ಸುಧೆ ಹಿಡಿದು | ಬಂದನು
ಕಡು ಕರುಣಿಯು ಒಲಿದು
ಕುಡಿಗಣ್ಣಿನ ಜಲ ಸಡಿಲಲು ಕಲಶದಿ
ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ 1
ಸುರರು ಪೂಮಳೆಗರೆಯೆ | ಹರುಷದಿ
ಹರಿಯು ಕರವ ಪಿಡಿಯೆ
ವರವನು ಪಡೆದಳು ಶರಣರ ಪೊರೆಯಲು
ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ 2
ಭಕುತಿಯಿಂದಲಿ ನಿತ್ಯ | ಸೇವಿಪ
ಸಕಲ ಜನಕೆ ಸತ್ಯ
ಭಕುತಿ ಮುಕುತಿಯಿತ್ತು ಸುಕೃತರ ಮಾಡುವ
ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ 3
***