Showing posts with label ಏನೇನ ದಾನವ ಮಾಡಲು ಹರಿಯ ಧ್ಯಾನಕ್ಕೆ ಸಮವಾದ purandara vittala ENENA DAANAVA MAADALU HARIYA DHYAANAKKE SAMAVAADA. Show all posts
Showing posts with label ಏನೇನ ದಾನವ ಮಾಡಲು ಹರಿಯ ಧ್ಯಾನಕ್ಕೆ ಸಮವಾದ purandara vittala ENENA DAANAVA MAADALU HARIYA DHYAANAKKE SAMAVAADA. Show all posts

Tuesday 9 November 2021

ಏನೇನ ದಾನವ ಮಾಡಲು ಹರಿಯ ಧ್ಯಾನಕ್ಕೆ ಸಮವಾದ purandara vittala ENENA DAANAVA MAADALU HARIYA DHYAANAKKE SAMAVAADA



ಏನೇನು ದಾನವ ಮಾಡಲಿ ಹರಿ-
ಧ್ಯಾನಕ್ಕೆ ಸಮವಾದ ದಾನಗಳುಂಟೆ

ಶತಕೋಟಿ ಕನ್ಯಾಪ್ರದಾನವ ಮಾಡಲಿ
ಅತಿಶಯ ಉದಕ ದಾನವ ಮಾಡಲಿ
ಮತಿ ಶುದ್ಧವಾಗಿ ಭೂದಾನವ ಮಾಡಲಿ
ಕೃತಿ ರಮಣನ ಧ್ಯಾನಕೆ ಸರಿಯುಂಟೆ

ದಿನಕೊಂದು ಸಾವಿರ ಗೋದಾನ ಮಾಡಲಿ
ಅನುದಿನ ಅನ್ನದಾನವ ಮಾಡಲಿ
ಘನವಾಗಿ ಸುವರ್ಣ ದಾನವ ಮಾಡಲಿ
ವನಜನಾಭನ ಧ್ಯಾನಕೆ ಸರಿಯುಂಟೆ

ಸಾದರದಿ ತರ್ಕ ವ್ಯಾಕರಣ ಪೇಳಲಿ
ವೇದ ಗೀತ ಭಾಷ್ಯವನೋದಲಿ
ಸಾಧಿಸಿ ಸ್ನಾನ ಜಪಂಗಳ ಮಾಡಲಿ
ಮಾಧವನ ಧ್ಯಾನಕ್ಕೆ ಸರಿಯುಂಟೆ

ಉತ್ತಮವಾದ ವಸ್ತ್ರ ದಾನವ ಮಾಡಲಿ
ಮುತ್ತು ಮಾಣಿಕ್ಯ ದಾನವ ಮಾಡಲಿ
ಅತ್ಯಂತ ವಿದ್ಯಾ ಪ್ರದಾನವ ಮಾಡಲಿ
ಚಿತ್ತಜ ಪಿತನ ಧ್ಯಾನಕೆ ಸರಿಯುಂಟೆ

ನಾನಾ ತೀರ್ಥಗಳಲ್ಲಿ ಸ್ನಾನವ ಮಾಡಲಿ
ಕಾನನದೊಳಗೆ ತಪವ ಮಾಡಲಿ
ಜ್ಞಾನದಿಂದ ಶಾಸ್ತ್ರಾರ್ಥ ಮಾಡಲಿ ನಿನ್ನ
ಧ್ಯಾನಕೆ ಸರಿಯುಂಟೆ ಪುರಂದರ ವಿಠಲ
****

ರಾಗ ಪಂತುವರಾಳಿ. ಛಾಪು ತಾಳ (raga, taala may differ in audio)

pallavi

EnEnu dAnava mADali hari dhyAnakke samavAda dAnangaLuNTe

caraNam 1

shatakOTi kanyApradAnava mADali atishayada udaka dAnava mADali
mati shuddhavAgi bhUdAnava mADali krti ramaNana dhyAnake sariyuNTe

caraNam 2

dinagondu sAvira gOdAna mADali anudina annadAna mADali
ghanavAgi suvarNa dAnava mADali vanajanAbhana dhyAnake sariyuNTe

caraNam 3

sAdaradi tarka vyAkaraNa pELali vEda gIta bhASyavanOdali
sAdhisi snAna japangaLa mADali mAdhavana dhyAnakke sariyuNTe

caraNam 4

uttamavAda vastra dAnava mADali muttu mANikya dAnava mADali
atyanta vidyA pradAnava mADali cittaja pitana dhyAnake sariyuNTe

caraNam 5

nAnA tIrttagaLalli snAnava mADali kAnanadoLage tapava mADali
jnAnadinda shstrArtta mADali ninna dhyAnake sariyuNTe purandara viTTala
***

ಏನೇನ ದಾನವ ಮಾಡಲು - ಹರಿಯ |
ಧ್ಯಾನಕೆ ಸಮವಾದ ದಾನಂಗಳುಂಟೆ ? ||ಪ.

ದಿನಕೊಂದು ಲಕ್ಷ ಗೋದಾನವ ಮಾಡಲು |
ಅನುದಿನ ಉದಕದಾನವ ಮಾಡಲು ||
ಮನಶುದ್ಧವಾದ ಭೂದಾನವ ಮಾಡಲು |
ವನಜನಾಭನ ಧ್ಯಾನಕೆ ಸಮವುಂಟೆ ? 1

ಉತ್ತಮವಾದ ವಸ್ತ್ರವ ದಾನಮಾಡಲು |
ಮುತ್ತು ಮಾಣಿಕವ ದಾನವ ಮಾಡಲು ||
ಅತ್ಯಂತ ವಿದ್ಯಾ ಪ್ರದಾನವ ಮಾಡಲು |
ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2

ಶತಕೋಟಿ ಕನ್ಯಾಪ್ರದಾನವ ಮಾಡಲು |
ಶತಶತ ಸುವರ್ಣ ದಾನವ ಮಾಡಲು ||
ಮಿತಿಯಿಲ್ಲದೆ ಅನ್ನದಾನವ ಮಾಡಲು |
ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3

ನಾನಾ ತೀರ್ಥದಲಿ ಸ್ನಾನವ ಮಾಡಲು |
ಕಾನನದೊಳಗೆ ತಪವ ಮಾಡಲು |
ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |
ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4

ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |
ಹರುಷದಿ ವಿಷ್ಣುಪಂಚಕ ಮಾಡಲು ||
ಪರಮ ಕಠಿಣ ಚಾಂದ್ರಾಯಣ ಮಾಡಲು |
ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
***