Showing posts with label ಕೃತ್ತಿಕೋತ್ಸವ ನೋಡುವ ಬಾರೆ ಕೃತ್ತಿಕೋತ್ಸವ ಗೀತೆ venkatakrishna. Show all posts
Showing posts with label ಕೃತ್ತಿಕೋತ್ಸವ ನೋಡುವ ಬಾರೆ ಕೃತ್ತಿಕೋತ್ಸವ ಗೀತೆ venkatakrishna. Show all posts

Tuesday 1 June 2021

ಕೃತ್ತಿಕೋತ್ಸವ ನೋಡುವ ಬಾರೆ ಕೃತ್ತಿಕೋತ್ಸವ ಗೀತೆ ankita venkatakrishna

by yadugiriyamma 

 ಕೃತ್ತಿಕೋತ್ಸವ ಗೀತೆ

ಕೃತ್ತಿಕೋತ್ಸವ ನೋಡುವ ಬಾರೆ ನ
ಮ್ಮಾರ್ತಿಯ ಪರಿಹರಿಪನು ನೀರೆ ಪ.

ವೃಶ್ಚಿಕ ಕಾರ್ತೀಕ ಮಾಸದಿ ಕೃತ್ತಿಕೆ
ಪೋರ್ನೊಮಿ ದಿವಸದಿ ಕಂಕಣವನು
ಆನಂದದಿ ಕಟ್ಟಿ ಶಂತನುಮಂಟಪದಿ
ಬಹುಚಂದದಿ [ನಿಂದ]1

ಮಿಂದು ಮಡಿಯ ತಾನುಟ್ಟನೆ
ಚಂದಂದಾಭರಣ ತೊಟ್ಟನೆ
ಭಕ್ತರಿಗೆ ತೀರ್ಥ ಕೊಟ್ಟನೆ ಸ್ವಾಮಿ
ಅರ್ತಿಯಿಂದಲೆ ತಾ ಪೊರಟಾನೆ 2

ಮಾನಸದಲಿ ಮಹಾದೀವವನು
ಮಹಾಧ್ಯಾನದ ಮೇಲಿರಿಸಿ
ಬೇಗ ಉತ್ತಮ ನಂಬಿದೀಪವನಚ್ಚಿದನಾಗ
ಭಕ್ತವತ್ಸಲನಾಲಯಕೆಲ್ಲ 3

ಹಾರ ಪುಷ್ಪದ ಕೋಳಿಕೆಯಲ್ಲಿ ವೈ
ಯಾರದಿಂದಲೆ ಶ್ರೀರಂಗನೇರಿ
ಭೇರಿದುಂದುಭಿ ವಾದ್ಯಗಳಲ್ಲಿ ಸ್ವಾಮಿ
ಚಕ್ರಮೂರುತಿಯಮಂಟಪದಲ್ಲಿ 4

ಭಕ್ತವತ್ಸಲ ಶ್ರೀಕೃಷ್ಣನೆ ಮತ್ತೆರಡು
ಪಂದ (?)ವನಿತ್ತಾನೆ ಮುದದಿ
ಪಕ್ಕೆ ಪುರಿ (?) ಇಟ್ಟಾನೆ ಸ್ವಾಮಿ ಮಹ
ಲಕ್ಷ್ಮಿಗೆ ಸೇವೆ ಕೊಟ್ಟಾನೆ 5

ಆಳ್ವಾರರಿಗೆ ಓಲೆ ಬರೆದಾನೆ
ಆಳುಗಳ ಕೈಲಿತ್ತು ಪೊರೆದಾನೆ
ಕರ್ಪೂರವನೆ ಸೂರೆಗೊಂಡನೆ ಸ್ವಾಮಿ
ಭಕ್ತರ ಹಸ್ತದಲಿ ಚಿತ್ತೈಸಿದನೆ 6

ನಂದನಕಂದ ಮುಕುಂದನೆ
ಇಂದಿರೆರಮಣ ಗೋವಿಂದನೆ
ಸುಂದರ ಮಂದರೋದ್ಧಾರನೆ
ಭವಬಂಧನಂಗಳನೆಲ್ಲ ಕಳೆವನೆ 7

ಕೃತ್ತಿಕ ದೀಪದುತ್ಸವವನ್ನು
ಅರ್ತಿಯಿಂದಲೆ ನೋಡಿದವರಿಗೆ
ಭಕ್ತವತ್ಸಲ ಶ್ರೀ ವೆಂಕಟರಂಗನು
ಮುಕ್ತಿಯ ಕೊಡುವನು ಸತ್ಯವಿದು 8
****