Showing posts with label ನರಜನ್ಮ ವ್ಯರ್ಥವಲ್ಲವೇ ಈ ಮೂಢರ ನರಜನ್ಮ ವ್ಯರ್ಥವಲ್ಲವೇ gurumahipati. Show all posts
Showing posts with label ನರಜನ್ಮ ವ್ಯರ್ಥವಲ್ಲವೇ ಈ ಮೂಢರ ನರಜನ್ಮ ವ್ಯರ್ಥವಲ್ಲವೇ gurumahipati. Show all posts

Wednesday, 1 September 2021

ನರಜನ್ಮ ವ್ಯರ್ಥವಲ್ಲವೇ ಈ ಮೂಢರ ನರಜನ್ಮ ವ್ಯರ್ಥವಲ್ಲವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನರಜನ್ಮ ವ್ಯರ್ಥವಲ್ಲವೇ | ಈ ಮೂಢರ | ನರಜನ್ಮ ವ್ಯರ್ಥವಲ್ಲವೇ ಪ 


ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ | ತರಣೋಪಾಯದ ನಿಜ ತಿಳಿದವನಲ್ಲಾ 1 

ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ | ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ 2 

ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು | ಲೆತ್ತ ಪಗಡಿಯಾಡಿ ಹೊತ್ತು ಗಳೆವನು 3 

ವಾಸುದೇವನ ಸೇವೆಗಾಲಸ್ಯ ಹಿಡಿದಾ | ಕಾಸಿನ ಆಶೆಗೆ ಎತ್ತಾಗಿ ದುಡಿವಾ 4 

ಮಹಿಪತಿ ನಂದನ ಪ್ರಭುವಿನ ಮರತಾ | ಸ್ವಹಿತದ ಹಾದಿಗೆ ಅವನು ಹೊರತಾ 5

***