Showing posts with label ದಾಮ್ರ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು shreeda vittala. Show all posts
Showing posts with label ದಾಮ್ರ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು shreeda vittala. Show all posts

Sunday, 1 August 2021

ದಾಮ್ರ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು ankita shreeda vittala

 ..

kruti by Srida Vittala Dasaru  Karjagi Dasappa

ಲಾವಣಿ ಪದ


ದಾಮ್ರ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು

ಯಾರಿಗಾಗಿ ಮಾರಬಂದೆ ಹಾಲ್ ಮೊಸರಾ ಹೇಳ್ ನಿನ್ನ ಹೆಸರಾ

ದೂರ್ ದೂರಲ್ಲ ಕೋಲ್‍ಕಾರ ಕೃಷ್ಣ ಕೇಳು ಬಾಲೆ

ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು 1


ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ

ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ

ಪುಂಡತನ ಬುದ್ದಿಯಿದು ಥರವೇನೆಂದರೆ

ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ 2


ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿ

ಸಾಕು ನಿನ್ನ ಮಾತೀಗ ಸಲುಗೇನೋ ನಿನ್ನ ನಗೆ ಏನೋ

ಸಾಕು ನಿನ್ನ ಮಾತೀಗ ಸಲುಗೇನೆಂದರೆ

ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ 3


ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ

ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ

ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ

ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ 4


ಒಳತನಕ್ಯಾತಕೆ ಬೆಳತನಕ್ಯಾತಕೆ

ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ

ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು

ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ5

***