Showing posts with label ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ shree krishna. Show all posts
Showing posts with label ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ shree krishna. Show all posts

Wednesday, 1 September 2021

ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ankita shree krishna

..

ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ


ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1


ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2


ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3


ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4


ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5


ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6


ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7

***