ರಾಗ ಪೂರ್ವಿ. ಅಟ ತಾಳ
ನಾ ನಿನ್ನೊಳನ್ಯ ಬೇಡುವದಿಲ್ಲ ,ಎನ್ನ
ಹೃದಯ ಕಮಲದೊಳು ನಿಂದಿರು ಹರಿಯೆ
ಶಿರ ನಿನ್ನ ಚರಣಕೆ ಎರಗಲಿ, ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ ನಿನ್ನ
ನಿರ್ಮಾಲ್ಯವ ನಾಸವಾಘ್ರಾಣಿಸಲಿ ಹರಿಯೆ
ನಾಲಿಗೆ ನಿನ್ನ ಕೊಂಡಾಡಲಿ, ಎನ್ನ
ಕರಗಳೆರಡು ನಿನ್ನರ್ಚಿಸಲಿ ಹರಿಯೆ
ಚರಣ ತೀರ್ಥ ಯಾತ್ರೆ ಮಾಡಳಿ, ಎನ್ನ
ಮನ ನಿನ್ನ ಅನುದಿನ ಸ್ಮರಿಸಿಲಿ ಹರಿಯೆ
ಬುದ್ಧಿ ನಿನ್ನೊಳು ಬೆರೆತ್ಹೋಗಲಿ, ಎನ್ನ
ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆ
ಭಕ್ತ ಜನರ ಸಂಗವಾಗಲಿ, ಪುರಂದರ
ವಿಠಲನೆ ಇಷ್ಟೇ ದಯಮಾಡೋ ಹರಿಯೆ
***
ನಾ ನಿನ್ನೊಳನ್ಯ ಬೇಡುವದಿಲ್ಲ ,ಎನ್ನ
ಹೃದಯ ಕಮಲದೊಳು ನಿಂದಿರು ಹರಿಯೆ
ಶಿರ ನಿನ್ನ ಚರಣಕೆ ಎರಗಲಿ, ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ ನಿನ್ನ
ನಿರ್ಮಾಲ್ಯವ ನಾಸವಾಘ್ರಾಣಿಸಲಿ ಹರಿಯೆ
ನಾಲಿಗೆ ನಿನ್ನ ಕೊಂಡಾಡಲಿ, ಎನ್ನ
ಕರಗಳೆರಡು ನಿನ್ನರ್ಚಿಸಲಿ ಹರಿಯೆ
ಚರಣ ತೀರ್ಥ ಯಾತ್ರೆ ಮಾಡಳಿ, ಎನ್ನ
ಮನ ನಿನ್ನ ಅನುದಿನ ಸ್ಮರಿಸಿಲಿ ಹರಿಯೆ
ಬುದ್ಧಿ ನಿನ್ನೊಳು ಬೆರೆತ್ಹೋಗಲಿ, ಎನ್ನ
ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆ
ಭಕ್ತ ಜನರ ಸಂಗವಾಗಲಿ, ಪುರಂದರ
ವಿಠಲನೆ ಇಷ್ಟೇ ದಯಮಾಡೋ ಹರಿಯೆ
***
pallavi
nA ninnoLanya bEDuvadilla enna hrdaya kamaladoLu nindiru hariye
caraNam 1
shira ninna caraNage eragali enna cakSu sadA ninna nODali hariye
karNa gItangaLa kELali ninna nirmAlya nAsavAghrANisali hariye
caraNam 2
nAlige ninna koNDADali enna karagaLeraDu ninnarcisali hariye
caraNa tIrtta yAtre mADaLi enna mana ninna anudina smarisi hariye
caraNam 3
buddhi ninnoLu beradhOgali enna citta ninnoLu sthiravAgali hariye
bhakta janara sangavAgali purandara viTTalane iSTE dayamADO hariye
***