ಹಿಡಕೋ ಬಿಡಬೇಡ ರಂಗನ ಪಾದ ||ಪ||
ಹಿಡಕೋ ಬಿಡಬೇಡ ಕೆಡುಕ ಕಾಳಿಂಗನ
ಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ||
ಪುಟ್ಟಿದಾಗಲೆ ಇವ ದುರ್ಜನನೆನುತಲಿ
ಅಟ್ಟಿದರಾಗಲೆ ತಾಯ್ತಂದೆಯರು
ಮುಟ್ಟಿ ತನಗೆ ಮೊಲೆಗೊಟ್ಟಳ ಮಡುಹಿದ
ದುಷ್ಟ ಕೃಷ್ಣನ ಹೋಗಬಿಟ್ಟರೆ ಸಿಕ್ಕನು ||
ಒಚ್ಹೊತ್ತನ್ನಕೆ ನಡೆದರೆ ಬಂಡಿಯ
ನುಚ್ಚು ಮಾಡಿ ಕಾಲಲಿ ಒದ್ದ
ಶಿಕ್ಷಿಸಲು ಜೋಡು ವೃಕ್ಷವ ತರಿದಿಟ್ಟ
ರಚ್ಚೆಗಾರನೆಂದು ಬೆಚ್ಚದೆ ಜಗದೊಳು ||
ಇದ್ದಲ್ಲಿ ಇರನಿವ ಬುದ್ಧಿ ಎಳ್ಳಷ್ಟಿಲ್ಲ
ಹದ್ದನೇರಿ ತಿರುಗಾಡುವನು
ಮೆದ್ದೆಯಾತಕೆ ಮಣ್ಣ ತೆಗೆ ಬಾಯನೆಂದರೆ
ಅದ್ಯಂತ ಜಗವನು ತೋರಿ ಅಂಜಿಸಿದನ ||
ಮಕ್ಕಳೊಳಗೆ ಪುಂಡ ಮನೆ ಮನೆಗಳ ಹೊಕ್ಕು
ಸಕ್ಕರೆ ನೊರೆಹಾಲು ಸವಿಸವಿದು
ಬೆಕ್ಕಿನ ಮೇಲಿಟ್ಟು ಬೆಣ್ಣೆಯ ತಾ ಮೆದ್ದು
ಸಿಕ್ಕದೆ ಜಿಗಿದೋಡಿ ಪೋಗುವ ಕಳ್ಳನ ||
ಸಾರ ಹೃದಯನಲ್ಲ ಭಾರಿಯ ಗುಣವಿಲ್ಲ
ಆರ ಮಾತನು ಇವ ಲೆಕ್ಕಿಸನು
ನೀರೊಳಗಿಳಿದು ನಾರೇರ ಸೀರೆಯ ಕದ್ದು
ಹಾರಿ ಹೊನ್ನೆಯ ಮರವೇರಿದ ಕೃಷ್ಣನ ||
ಕಾಳರಕ್ಕಸರೊಳು ಕದನ ಬೇಡೆಂದರೆ
ಹೇಳಿದ ಹಾಗೆ ಕೇಳುವನಲ್ಲ
ಕೂಡೆ ಆಡುವ ಮಕ್ಕಳಂಜಿಕೊಂಡರಾಗ
ಗಾಳಿಯ ಮುರಿದಿಟ್ಟ ಗೈಯಾಳಿ ರಂಗನ ||
ಜೀರಿಗೆ ಬೆಲ್ಲವ ಪಿಡಿದಂಬಿಕೆಯನು
ಸಾರಿ ಬಂದ ರುಕ್ಮಿಯನು ಕೊಂದು
ಹೋರಬೇಡೆಂದರೆ ರುಕ್ಮನ ಹೆಡೆಗಯ್ಯ
ತೇರಿಗೆ ಬಿಗಿದಂಥ ಚೋರ ಕೃಷ್ಣನ ಪಾದ ||
ಅಟ್ಟಿ ಹಾಯುವ ಏಳು ಗೂಳಿಗಳನ್ನು
ಕಟ್ಟಿ ಸತ್ರಾಜಿತಗೆ ರತ್ನವಿತ್ತು
ಅಷ್ಟ ಮಹಿಷಿಯರ ಅರ್ತಿಯ ಸಲಿಸಿದ
ಸೃಷ್ಟಿಗೊಡೆಯ ಶ್ರೀ ಕೃಷ್ಣನ ಪಾದವ ||
ಇರುಳೊಳು ಹೆಂಗಳ ಕೂಡಿ ಆಡುತಲಿ
ವರ ಯಮುನೆಯ ತೀರದಿ ನಿಂತ
ಬರಿಮಾತಿಲ್ಹದಿನಾರು ಸಾವಿರ ತರಳೇರ
ಮರುಳು ಮಾಡಿದ ಈ ಮದನ ಗೋಪಾಲನ ||
ಘಕ್ಕನೆ ಮಥುರೆಗೆ ಪೋಗಿ ಬರುವೆನೆಂದು
ಅಕ್ಕಯ್ಯ ಗೋಪಿಗೆ ಪೇಳುತಲಿದ್ದ
ಘಕ್ಕನೆ ಬಲರಾಮನೊಡಗೂಡಿ ರಥವೇರಿ
ಸಿಕ್ಕದೆ ಹೋಗುವ ಅಕ್ರೂರವರದನ ||
ಆನೆಯ ಮಡುಹಿದ ಅಗಸನ ಕೆಡಹಿದ
ತಾನರಸಗೆ ತಂದ ಹೂವನೆ ಮುಡಿದ
ಮಾನಿನಿ ಕುಬುಜೆಗೊಲಿದು ಗಂಧ ಧರಿಸಿದ
ಗಾನವಿನೋದಿ ಶ್ರೀಲಕುಮಿಯ ಅರಸನ ||
ಮಲ್ಲರನೆಲ್ಲರ ಚೆಲ್ಲಾಡಿ ಕೆಡಹಿದ
ಬಿಲ್ಲು ಮುರಿದು ಮಾವನ ಮಡುಹಿ
ನಿಲ್ಲದೆ ದೇವಕಿ ಸೆರೆಯನು ಬಿಡಿಸಿದ
ಫುಲ್ಲಲೋಚನ ಶ್ರೀ ಕೃಷ್ಣನ ಪಾದವ ||
ನರಕುರಿಗಳನೆಲ್ಲ ಭರದಿ ರಕ್ಷಿಪುದಕ್ಕೆ
ಪರಮಪಾವನ ನಾಮ ಇದು ಸಾಲದೆ
ಕರಿ ಧ್ರುವ ಬಲಿ ಪಾಂಚಾಲಿಗೆ ವರವಿತ್ತ
ಪುರಂದರವಿಠಲನ ಚರಣ ಕಮಲವನು ||
****
ರಾಗ ಪೂರ್ವಿಕಲ್ಯಾಣಿ ಆದಿ ತಾಳ (raga, taala may differ in audio)
pallavi
hiDakO biDabEDa rangana pAda
anupallavi
hiDakO biDabEDa keDuka kALingana maDuvinoL dhumuki kuNidADo krSnana pAda
caraNam 1
puTTidAgale iva durjananenutali attidarAgale tAi tandeyaru muTTi
tanage molegoTTaLa maDuhida duSTa krSNana hOga biTTare sikkanu
caraNam 2
ochottannake naDedare baNDiya nuccu mADi cakalali odda
shikSisalu jODu vrkSava taridiTTa raccegAranendu beccade jagadoLu
caraNam 3
iddalli iraniva buddhi eLLaSTilla hiddanEri tirugADuvanu
medde yAtake maNNa tEge bAyanendare adyanta jagavanu tOri anjisidana
caraNam 4
makkaLoLalge puNDa mane manegaLa hokku sakkare norehAru savisavidu
bekkina mEliTTu beNNeya tA meddu sikkade jigidODi pOguva kaLLana
caraNam 5
sAra hrdayanalla bhAriya guNavilla Ara mAtanu iva lekkisanu
nIroLagiLidu nArEra sIreya kaddu hAri honneya maravErida krSNana
caraNam 6
kALa rakkasaroLu kadana bEDendare hELida hAge kELuvanalla
kUDe Aduva makkaLanji koNDarAga kALiya muridiTTa kaiyALi rangana
caraNam 7
jIrige bellava hiDidambikeyanu sAri banda rukmiyanu kondu
hOra bEDendare rukmana heDagayya tErige bigidanda cOra krSNana pAda
caraNam 8
aTTi hAyuva Elu kULigaLannu kaTTi strAjitake ratnavittu
aSTa mahiSiyara artiya salisida shrSTi koDeya shrI krSNana pAdava
caraNam 9
iruLoLu hengaLa kUDi Adutali vara yamuneya tIradi ninta
barimADil hadinAru sAvira taraLEra maruLu mADida madana gOpAlana
caraNam 10
khakkane mathurege pOgi baruvenendu akkayya gOpige pELutalidda
khakkaLe balarAmanoDa kUDi rathavEri sikkade hOguva akrUra varadana
caraNam 11
Aneya maDuhida agasana keDahida tAnarasage tanda huvane muDida
mAnini kubugolidu kandha dharisida gAnavinOdi shrI lakumiya arasana
1
caraNam 2
mallaranellara cellADi keDahida billu muridu mAvana maDuhi
nillade dEvaki sereyanu piDisida pullalOcana shrI krSNana pAdava
1
caraNam 3
narakurigaLanella bharadi rakSipudakke parama pAvana nAma idu sAlade
kali dhruva bali pAncAlige varavitta purandara viTTalana caraNa kamalavanu
***