ಎಷ್ಟೆಂದು ಹೇಳಲಮ್ಮಯ್ಯಕೃಷ್ಣನ ದಯವ ದಿಟ್ಟ ಪಾಂಡವರಲ್ಲೆಪ್ರಾಣ ಇಟ್ಟುಕೊಂಡಿ ಹನಮ್ಮ ಪ.
ನೀರಜಾಕ್ಷಗೆ ನಮಿಸಿ ವೀರರೈವರು ಮಹಾದ್ವಾರದಲ್ಲಿ ಹೋರೆಂದು ಸಾರಿ ಹೇಳಿದೆನಮ್ಮಮಾರನಯ್ಯನ ಪಿತನ ಮೋರೆ ನೋಡುತಲಿತೀವ್ರ ಕರೆತಾರೆ ಮುತ್ತಿನ ಹಾರ ನಿನಗೆ ಈವೆನೆಂದ1
ಇಂದು ಮುಖಿಗೆ ನಾನು ವಂದಿಸಿ ಐವರು ಹೊರಗೆ ಬಂದಾರೆ ಹೀಗೆಂದೆ ನಮ್ಮಯ್ಯಮಂದಹಾಸನು ದಯದಿಂದ ನೋಡುತಲೆನ್ನತಂದು ತೋರಮ್ಮ ತೋಳಬಂದಿ ನಿನಗೀವೆನೆಂದ2
ಪುಟ್ಟ್ಟಸುಭದ್ರೆ ಪಾಂಡವರ ಪಟ್ಟದರಾಣಿ ದ್ರೌಪತಿಅಷ್ಟೂರೂ ಬಂದಾರೆಂಬೊ ಉತ್ಕ್ರಷ್ಟ ಹೇಳಿದೆನಮ್ಮತುಷ್ಟÀನಾಗಿ ರಮಿಯರಸು ಥಟ್ಟನೆ ಕರೆತಾರೆÀಂದುಕೊಟ್ಟು ವೀಳ್ಯವ ದಯದ ವೃಷ್ಟಿಗರೆದನಮ್ಮ 3
****