Showing posts with label ಪ್ರಾಣಿ ದಿನ ಮೋಸಗಳೆಯಬ್ಯಾಡ mahipati. Show all posts
Showing posts with label ಪ್ರಾಣಿ ದಿನ ಮೋಸಗಳೆಯಬ್ಯಾಡ mahipati. Show all posts

Wednesday 1 September 2021

ಪ್ರಾಣಿ ದಿನ ಮೋಸಗಳೆಯಬ್ಯಾಡ ankita mahipati

ಪ್ರಾಣಿ ದಿನ ಮೋಸಗಳೆಯಬ್ಯಾಡ ಪ 


ವಂದಿಸದೆ ಸಾಧು ಸಜ್ಜನರ ಶ್ರೀಪಾದವನು ಬರುದೆ ಶೋಧವಿಯ ನೀ ಮಾಡಬ್ಯಾಡ ಅರಿಯದ ಧಮರಸಂಗ ಕೂಡಬ್ಯಾಡ ಪರನಿಂದೆ ದೂಷಣೆಯ ಮಾಡಬ್ಯಾಡ ಗುರುಹಿರಿಯರ ಮಾತು ಮೀರಬ್ಯಾಡ 1 

ಏನೆಂದು ತಿಳಿಯದೆ ಜ್ಞಾನಿಗಳ ಮಹಿಮೆಯನು ಅಜ್ಞಾನತನದಲಿ ಉಳಬ್ಯಾಡ ಹೀನ ಗುಣದಲಿ ನೀ ಬಾಳಬ್ಯಾಡ ಅನ್ಯಾಯತನವೆ ನೀ ಕೇಳಬ್ಯಾಡ ನಿನ್ನ ಸ್ತುತಿ ನೀನೆವೆ ಹೇಳಬ್ಯಾಡ 2 

ನಿನ್ನೊಳು ನಿನ್ನ ಸ್ಥಿತಿಗಳನು ತಿಳಿಯದೆ ಕುಂದ ನೀ ನೋಡಬ್ಯಾಡ ನಾನೆ ದೊಡ್ಡವನೆಂದು ಆಡಬ್ಯಾಡ ಮಹಿಪತಿ ನೀ ದಗಿಯ ಬೀಳಬ್ಯಾಡ ಗುರು ಆಜ್ಞೆಯಿಂದ ಕಡಿಗ್ಯಾಗಬ್ಯಾಡ ಪ್ರಾಣಿ 3

*****