Showing posts with label ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ gopalakrishna vittala. Show all posts
Showing posts with label ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ gopalakrishna vittala. Show all posts

Monday, 2 August 2021

ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ ankita gopalakrishna vittala

ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ

ನಾಡಿಗೊಡೆಯನೆ ರಂಗ ದೇವ ದೇವ ಪ.


ಬೇಡಲೇನನೊ ಸ್ವಾಮಿ ಕಾಡಲ್ಯಾತಕೊ ದೇವ

ನೀಡೊ ನಿನ್ನ ಪದಕಮಲ ಶ್ರೀ ಶ್ರೀನಿವಾಸ ಅ.ಪ.


ಶಿರದಲ್ಲಿ ಮಕುಟ ವರ ಫಣೆಯಲ್ಲಿ ತಿಲುಕವು

ಉರದಲ್ಲಿ ಸಿರಿವತ್ಸ ಹಾರ ಪದಕಗಳು

ಕರ ಶಂಖ ಚಕ್ರಯುತ ನೆರಿಗೆ ಪೀತಾಂಬರವು

ಸುರರು ಪಾಲಿಸುವಂಥ ಪಾದ ಕಮಲಗಳ 1

ಮಂದಹಾಸ ಮುಖಾರವಿಂದದಲಿ ಕಿರುನಗೆಯು

ಬಂದ ಭಕ್ತರಿಗಭಯ ತೋರ್ಪಕರವೊ

ನಿಂದು ಸ್ತುತಿಸುವರಿಗಾನಂದ ತೋರುವ ದಿವ್ಯ

ಒಂದೊಂದು ಅವಯವದ ಸುಂದರಾಕೃತಿಯ 2

ವೇದವನೆ ತಂದು ಸುತಗಾದರದಿ ಇತ್ತೆ ಕ್ಷೀ-

ರೋದಧಿಯ ಮಥಿಸಿ ಸುಧೆಯ ಸುರರಿಗುಣಿಸಿದೆಯೊ

ಭೂದೇವಿಯನೆ ಪೊರೆದು ಉದ್ಭವಿಸಿ ಕಂಭದೊಳು

ಪಾದದಲಿ ಭೂಮಿಯನು ಅಳೆದ ವಟುರೂಪಿ 3

ದುಷ್ಟ ಕ್ಷತ್ರಿಯರನೆ ಕುಟ್ಟಿ ಕೆಡಹಿದ ಶೌರಿ

ದಿಟ್ಟತನದಲಿ ಅನ್ನ ಬಟ್ಟೆಯನೆ ತೊರೆದೆÀ

ಕೊಟ್ಟು ಗೋಪಿಗೆ ಮುದವ ಮೆಟ್ಟಿ ಕಾಳಿಂಗನ

ಬಿಟ್ಟು ವಸನವ ಕಲಿದುಷ್ಟರನೆ ಕೊಂದೆ 4

ಅಪದ್ರಕ್ಷಕ ನಿನ್ನ ವ್ಯಾಪಾರ ರೂಪಗಳು

ತಾಪ ಪರಿಹರಗೈದು ಕಾಪಾಡೆಲೊ

ಶ್ರೀಪತಿಯೆ ಅಂತರ್ಬಹಿವ್ರ್ಯಾಪ್ತ ನಿರ್ಲಿಪ್ತನೇ

ಗೋಪಾಲಕೃಷ್ಣವಿಠ್ಠಲ ತಾಪ ಪರಿಹಾರನೆ 5

****