Showing posts with label ಶರಣು ಶರಣು ಶರ್ವಾಣಿಯೆ ಈಕ್ಷಿಸು ಶರಣು govinda SHARANU SHARANU SHARVANI EEKSHISU SHARANU. Show all posts
Showing posts with label ಶರಣು ಶರಣು ಶರ್ವಾಣಿಯೆ ಈಕ್ಷಿಸು ಶರಣು govinda SHARANU SHARANU SHARVANI EEKSHISU SHARANU. Show all posts

Tuesday, 5 October 2021

ಶರಣು ಶರಣು ಶರ್ವಾಣಿಯೆ ಈಕ್ಷಿಸು ಶರಣು ankita govinda SHARANU SHARANU SHARVANI EEKSHISU SHARANU

by ಗೋವಿಂದದಾಸ
ಶರಣು ಶರಣು ಶರ್ವಾಣಿಯೆ ಈಕ್ಷಿಸುಶರಣು ಶರ್ವನ ರಾಣಿ ಕಲ್ಯಾಣೀಶರಣು ಶರಣು ಸರ್ವೇಶ್ವರಿ ರಕ್ಷಿಸುಶರಣ ಜನರ ಶ್ರೇಣಿ ಫಣಿವೇಣಿ ಪ

ಹಿಮಕರ ಶೈಲ ಕುಮಾರಿ ಸುರಾಸುರನಮಿತೆ ಉಮಾದೇವಿ ಮಹದೇವಿಪ್ರಮಥಾಧಿಪೆ ಕೌಮಾರಿ ಪರಾತ್ಪರೆವಿಮಲೆ ಕೋಮಲಾಂಗಿ ಶ್ವೇತಾಂಗಿ 1

ವೈರಿಕಳೌಘ ವಿಹಾರಿಣಿ ಪೂರಿಣಿಗೌರಿ ಸೋದರಿ ನೀನೆ ಪ್ರವೀಣೆಸೈರಣೆ ಸುರ್ಜಿತೆ ತೋರುವ ಕಾರಣೆಗೌರೀ ಗಗನವಾಣೀ ಶುಕವಾಣಿ 2

ಮಂದಸ್ಮಿತಮುಖ ಚಂದ್ರಕೋಟಿಸಂಕಾಶೆ ವಿಶ್ವರೂಪೆ ಜಿತಪಾಪೆಸುಂದರಾಂಗಿ ಗೋವಿಂದದಾಸನಹೃನ್ಮಂದಿರ ಸುಮವಾಸೆ ಸಂತೋಷೆ 3
***