Showing posts with label ಬಂದಿದೆ ದೂರು ಬರಿದೆ ಪಾಂಡವರಿಗೆ neleyadikeshava. Show all posts
Showing posts with label ಬಂದಿದೆ ದೂರು ಬರಿದೆ ಪಾಂಡವರಿಗೆ neleyadikeshava. Show all posts

Wednesday, 16 October 2019

ಬಂದಿದೆ ದೂರು ಬರಿದೆ ಪಾಂಡವರಿಗೆ ankita neleyadikeshava

check kanaka dasa
ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||

ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||

ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದಲಿ ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨||

ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೆ ನಡೆದು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವ ದ್ರೋಣನೋ? ಪಾಂಡವರೋ? ||೩||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವ ಕರ್ಣನೋ? ಪಾಂಡವರೋ? ||೪||

ಮಥಿನಿಸಿ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವರ ಬಲವನು
ಹತ ಮಾಡಿದವ ಶಲ್ಯನೋ? ಪಾಂಡವರೋ ? ||೫||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆಂದವ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವ ಕೌರವನೋ? ಪಾಂಡವರೋ? ||೫||

ಕೌರವ ಪಾಂಡವರಿಗೆ ಭೇದವ ಪುಟ್ಟಿಸಿ
ಗೌಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||೬||
***********