Showing posts with label ಹತೆರಳಿದರು ಹರಿಪುರಕಿಂದು madhwapati vittala. Show all posts
Showing posts with label ಹತೆರಳಿದರು ಹರಿಪುರಕಿಂದು madhwapati vittala. Show all posts

Friday, 27 December 2019

ಹತೆರಳಿದರು ಹರಿಪುರಕಿಂದು ankita madhwapati vittala

ತೆರಳಿದರು ಹರಿಪುರಕಿಂದು || ಪಲ್ಲವಿ ||

ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಿಸಿ || ೨ ||

ಎತ್ತುವರಾರತಿ ಪುಷ್ಪಕವೇರಿಸಿ
ಸತ್ತಿಗೆ ಪಿಡಿಯೇ ದುಂದುಭಿಗಳು || ೩ ||

ಆ ಮಹಾವೈಕುಂಠನೈದುವರಿಗೆ ಹರಿ
ನಾಮದ ಸೋಪಾನ ದಯದಿಂದ ತೋರಿ || ೪ ||

ವರವೇದತುಲ್ಯ ಪದಗಳ ಸಂಖ್ಯೆಯ ಮಾಡಿ
ಗುರು ಮಧ್ವಪತಿವಿಠಲನ್ನ ಸ್ಮರಿಸುತಲಿ || ೫ ||
**********


[ ಈ ಪದಗಳನ್ನು ರಚಿಸಿರುವ ಗುರುಮಧ್ವಪತಿವಿಠಲಾಂಕಿತದ ದಾಸರು ಪುರಂದರದಾಸರ ಮಕ್ಕಳೆಂದೇ ಪ್ರತೀತಿ