RSS song
ಧಾವಿಸು ಮುಂದೆ ಧಾವಿಸು ||
ಧೀರಪಥದಿ ಅಂತಿಮ ಜಯ ನಿನ್ನದೆಂದೆ ಭಾವಿಸು ||ಪ||
ಸೋಲರಿಯದ ಶಕ್ತಿ ನಿನದು ಸಾವರಿಯದ ಸಂತತಿ
ಕಾಲನ ಜತೆ ಕಾಲನಿಡುವ ನಿನದಜೇಯ ಸಂಸ್ಕೃತಿ
ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ
ಅವಳ ಗರಿಮೆ ಗಳಿಕೆಗಾಗಿ ಜೀವಿಸು ||೧||
ಅಂಜುವೆದೆಯ ಕದವ ತೆರೆದು ಧ್ಯೇಯಜಲವ ಚಿಮುಕಿಸು
ನಂಜನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು
ಮಂಜು ಹರಿದು ಅರಿಯ ಎದುರು ವಿಜಯಖಡ್ಗ ಝಳಪಿಸು
ಹೋರಿಗುರಿಯ ಸೇರು ಬದುಕನರ್ಪಿಸು ||೨||
ಹೇಡಿಗೆಷ್ಟು ಸಾವು ಬಹುದೊ ಎಷ್ಟು ಬದುಕೊ ತಿಳಿಯದು
ವೀರ ನಿನಗೆ ಒಮ್ಮೆ ಮಾತ್ರ ಬದುಕು ಬೆಳಕು ದೊರೆವುದು
ಶತ್ರುಂಜಯ ಮೃತ್ಯುಂಜಯನೆನುವ ಮಾತ ನೆನಪಿಡು
ಕ್ಷಾತ್ರಪಥವ ಹಿಡಿದು ತಾಯ ರಕ್ಷಿಸು ||೩||
***
dhAvisu muMde dhAvisu
dhIrapathadi aMtima jaya ninnadeMde BAvisu ||pa||
sOlariyada Sakti ninadu sAvariyada saMtati
kAlana jate kAlaniDuva ninadajEya saMskRuti
ninage hAlanereda tAyi sanAtane BArati
avaLa garime gaLikegAgi jIvisu ||1||
aMjuvedeya kadava teredu dhyEyajalava cimukisu
naMjanuMgi amaranAgu dhairyadhAre dhumukisu
maMju haridu ariya eduru vijayaKaDga JaLapisu
hOriguriya sEru badukanarpisu ||2||
hEDigeShTu sAvu bahudo eShTu baduko tiLiyadu
vIra ninage omme mAtra baduku beLaku dorevudu
SatruMjaya mRutyuMjayanenuva mAta nenapiDu
kShAtrapathava hiDidu tAya rakShisu ||3||
***
ಧಾವಿಸು ಮುಂದೆ ಧಾವಿಸು ||
ಧೀರಪಥದಿ ಅಂತಿಮ ಜಯ ನಿನ್ನದೆಂದೆ ಭಾವಿಸು ||ಪ||
ಸೋಲರಿಯದ ಶಕ್ತಿ ನಿನದು ಸಾವರಿಯದ ಸಂತತಿ
ಕಾಲನ ಜತೆ ಕಾಲನಿಡುವ ನಿನದಜೇಯ ಸಂಸ್ಕೃತಿ
ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ
ಅವಳ ಗರಿಮೆ ಗಳಿಕೆಗಾಗಿ ಜೀವಿಸು ||೧||
ಅಂಜುವೆದೆಯ ಕದವ ತೆರೆದು ಧ್ಯೇಯಜಲವ ಚಿಮುಕಿಸು
ನಂಜನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು
ಮಂಜು ಹರಿದು ಅರಿಯ ಎದುರು ವಿಜಯಖಡ್ಗ ಝಳಪಿಸು
ಹೋರಿಗುರಿಯ ಸೇರು ಬದುಕನರ್ಪಿಸು ||೨||
ಹೇಡಿಗೆಷ್ಟು ಸಾವು ಬಹುದೊ ಎಷ್ಟು ಬದುಕೊ ತಿಳಿಯದು
ವೀರ ನಿನಗೆ ಒಮ್ಮೆ ಮಾತ್ರ ಬದುಕು ಬೆಳಕು ದೊರೆವುದು
ಶತ್ರುಂಜಯ ಮೃತ್ಯುಂಜಯನೆನುವ ಮಾತ ನೆನಪಿಡು
ಕ್ಷಾತ್ರಪಥವ ಹಿಡಿದು ತಾಯ ರಕ್ಷಿಸು ||೩||
***