Showing posts with label ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ mohana vittala vyasaraja stutih. Show all posts
Showing posts with label ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ mohana vittala vyasaraja stutih. Show all posts

Sunday, 1 August 2021

ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ankita mohana vittala vyasaraja stutih

..

ಭುವನೇಂದ್ರತೀರ್ಥರ ಸ್ತೋತ್ರ

ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ಪ

ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ ಸಮೃದ್ಧಿ ಎಂದೆನಿಪ ಮುನಿಪ ||ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪಅದ್ವೈತ ತ್ರಯ ವರ ಪ್ರವರ್ತಕನೇ1

ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-ರಂತರದಲಿ ಪೇಳಿ ಹರುಷದಿಂ ||ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತುಯಂತ್ರವಾಹಕನ ತೀರ್ಥವನೆರೆದ ಧೀರ 2

ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥಕರಕಮಲ ಸಂಜಾತ ಭುವನ ವಿಖ್ಯಾತ ||ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ 3

***