..
kruti: tandevaradagopala vittala (ಪ್ರಹ್ಲಾದಗೌಡರು)
ಮಂಗಳ ಶ್ರೀ ಸ್ವಾದಿ ನಿಲಯನಿಗೆ ಜಯ ಮಂಗಳ ಶ್ರೀ ಗುರುವಾದಿಗಳರಸನಿಗೆ ಪ
ಪಂಚ ವೃಂದಾವನದೊಳು ತಾ ಸಂತೆಯ ನೆರಹಿದ ಭಾವಿ ಪಂಚ ರೂಪಾತ್ಮನಿಗೆ ಮಿಂಚಿನಂದದಿ ಭಾವಿ ವಿರಿಂಚಿನ ಸಹಿತ ತನ್ನ ಜನಕನ ರಾಜಿತ ಕವಿ ಮುನಿಗೆ 1
ಅರ್ಥಿಯಿಂದ ಪ್ರತಿ ತೀರ್ಥ ಪ್ರಬಂಧವ ಕೀರ್ತಿಸುವವರ ಅಪ್ರತಿ ತೀರ್ಥನಿಗೆ ಸುತ್ತಮುತ್ತ ಸರ್ವತತ್ವ ಪತಿಗಳಿಗೆ ತಾ ಉತ್ತರ ಹೇಳುವ ಜೀವೋತ್ತುಮನಿಗೆ2
ಕಾಲ ಕಾಲಗಳಿಗೆ ಮಹಕಾಲನಿಯಾಮಕ ಕಲಿ ಮಾರುತಗೆ ಫಾಲವದನ ತಂದೆ-ವರದಗೋಪಾಲವಿಠ್ಠಲನ ಆಳು ಕೃಪಾಳುಗೆ3
***