ಒಲಿದವಳ ಬಿಡುವುದು ಧರ್ಮವಲ್ಲ |
ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ||ಪ||
ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ |
ಅಂದೆ ನೇಮಿಸಿದರು ಪೆಸರನಿಟ್ಟು |
ಸಂದೇಹಗೊಳದಿರು ಮೈಲಿಗೆಯವಳೆಂದು |
ಬಂದ ಪ್ರಾಣವ ನೋಡು ಬರಿದೆ ಪೇಳುವಳಲ್ಲ ||
ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ |
ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ |
ಅನ್ಯಾಯವೇನು ಆಗಲಿ ಪೋಗುವರೇನೊ |
ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ||
ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ |
ಬಲು ಶುಚಿಯಾದೆನೊ ಶುದ್ಧ ಜಲದಿ |
ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ |
ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ ||
ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ |
ಸೊಗಸಿಗನೆ ಸರಸವಾಡುವನೆ ಬಾರೊ |
ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು |
ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ ||
ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ |
ಅಂಡೊಲಿವ ಖ್ಯಾತಿ ಎಂದಿಗೆ ತೀರದೂ |
ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ |
ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ ||
***
pallavi
olidavaLa biDuvadu dharmavalla celuva ninagAgi nA EsukAlake kapavidde
caraNam 1
tande tAyigaLalli puTTidAkSaNadalli ande nEnesidaru peseraniTTu
sandEhagoLadiru mailige yavaLendu banda prANava nODu bande pELuvaLalla
caraNam 2
kanyAvaseyalinda ninna dhyAnavallade kanya puruSarapEksya mADadalilla
anyAyavEnumAgali pOguvarEnO anyathA I nuduDige nijake nilluve nAnu
caraNam 3
maladalli mUru dina pOgAgi hOgidde balu suciyAdeno shudda jaladi
ghaLige taDedare enna prANa nilladO ninna nagali maitappisi dUra karedoyyO karuNadali
caraNam 4
nagegIdu mADadilu jagadoLage ippavaLa sogasigane sarasavADuvane bArO
maguLe mattobbaru meccidare ida pATu maguLEnu hosapariya tOruvadu nODidare
caraNam 5
kaNDu kANadehAge mAtanADidarenna aNDaleva khyAti endige tIradu
kuNDaligiri vAsa vijayaviThala venkaTa hiNDu bandhugaLiddarEnu mAnavanu tOrade
***