ಲಕ್ಷ್ಮಿದೇವಿ ಆರತಿ ಹಾಡು
ಮಂಗಳಾರುತಿ ಮಾಡಿರೆ ಮುದ್ದು ಲಕ್ಷ್ಮಿ ನಾರಾಯಣಗೆ
ಮಂಗಳಾರತಿ ಮಾಡಿ ಲಕ್ಷ್ಮಿ ನಾರಾಯಣಗೆ ಅಂಗನಿಮಣಿ
ಯರು ಭಾರಿ ಬಂಗಾರದ||ಪಲ್ಲ||
ಸಾರಸಮುಖಿಯರು ಸಾಸಿರನಾಮನ
ರಾಣಿಗಾರತಿನೆತ್ತಿ ವರಗಳ ಪಡೆಯಿರೆ||೧||
ಗಂಧ ಕುಂಕುಮದೀಪ ಧೂಪಗಳಿಂದಲಿ
ಚಂದಿರ ಸೋದರಿಗೆ ಚಂದದಾರತಿನೆತ್ತಿ||೨||
ಮಧ್ವೇಶಕೃಷ್ಣನ ಕೂಡ ಲಕ್ಷ್ಮಿಗಾರತಿನೆತ್ತಿ
ಬುಧ್ಧಿ ಜ್ಞಾನವ ಕೊಡಬೇಕೆಂದು ಕೋರುತ್ತ||೩||
***