Showing posts with label ಶ್ರೀಪತಿ ಸಲಹೆಂದು shree krishna ankita suladi ನರಸಿಂಹ ಪ್ರಾರ್ಥನಾ ಸುಳಾದಿ SRIPATI SALAHENDU NRUSIMHA PRAARTHANA SULADI. Show all posts
Showing posts with label ಶ್ರೀಪತಿ ಸಲಹೆಂದು shree krishna ankita suladi ನರಸಿಂಹ ಪ್ರಾರ್ಥನಾ ಸುಳಾದಿ SRIPATI SALAHENDU NRUSIMHA PRAARTHANA SULADI. Show all posts

Monday, 9 December 2019

ಶ್ರೀಪತಿ ಸಲಹೆಂದು shree krishna ankita suladi ನರಸಿಂಹ ಪ್ರಾರ್ಥನಾ ಸುಳಾದಿ SRIPATI SALAHENDU NRUSIMHA PRAARTHANA SULADI


Audio by Mrs. Nandini Sripad

ಶ್ರೀಪತಿ ಸಲಹೆಂದು ನೆನೆವಂಥ ಮನುಜರ..


ಅಹೋಬಿಲ ನರಸಿಂಹ ದೇವರ ಪ್ರಾರ್ಥನಾ ಸುಳಾದಿ 

ರಾಗ ಭೌಳಿ 

ಧ್ರುವತಾಳ 

ಶ್ರೀಪತಿ ಸಲಹೆಂದು ನೆನೆವಂಥ ಮನುಜರ
ತಾಪತ್ರಯವ ನೂಕಿ ಮುಕ್ತಿಯನೀವ ಕೃಷ್ಣ
ಅಕಳಂಕ ಚರಿತ ಆಶ್ರಿತಜನ ಪ್ರಿಯನ
ಭಕ್ತವತ್ಸಲ ಸುರಧೇನು ಶ್ರೀಯರಸನು
ಭಕ್ತಜನರ ದುಷ್ಕೃತಗಳ ಪರಿಹರ
ಭುಜಗಶಯನ ಪ್ರಲ್ಹಾದ ವಂದಿತನು
ಶ್ರೀಪತಿ ಸಲಹೆಮ್ಮ ಸುರರು ಸುಮ್ಮನದಿ ಪೂ ಮಳೆಗರೆಯಲು
ಪರಮ ಪುರುಷವಿತ್ತು ಸಲಹುವ ಹರಿಯೆಂದು ನಿನ್ನ
ನೆರೆನಂಬಿದೆನೊ ಲೀಲಾವತಾರ
ಪ್ರಸನ್ನ ಮೂರುತಿ ಅಹೋಬಿಲ
ನರಹರಿ ಕೃಷ್ಣ ಶ್ರೀಪತಿ ಸಲಹೆಂದು ॥ 1 ॥ 

ಮಟ್ಟತಾಳ 

ನಾರದಾದಿ ಅಂಬರೀಷ ಗೋವಾರ ಗಂಧ -
ರ್ವ ವಂದಿತ ಶ್ರೀರಮಣ ಸರ್ವಪೂಜಿತಾ ಗಂ -
ಭೀರಪುರುಷ ಲಕ್ಷ್ಮೀವಲ್ಲಭ ಶ್ರೀರಮಣ ಪೂಜಿತ
ಕಾರುಣ್ಯಮೂರುತಿ ಕಾಯೋ ಕರುಣದಲಿ ದಾಸರ
ನರಹರಿ ಕೃಷ್ಣರಾಯಾ ಶ್ರೀರಮಣ ॥ 2 ॥ 

ರೂಪಕತಾಳ 

ದಾಸನಾಗಿಹೆನಯ್ಯಾ ದೋಷರಹಿತ ಕೃಷ್ಣ
ಶೇಷಶಯನ ಈಶಾ ಈಶವಂದಿತ ಸ್ವಾಮಿ
ಪೂಶರನಯ್ಯನೇ ಪುಣ್ಯಚಾರಿತ್ರ ಕೇಶವ ದೈತ್ಯ
ಕಂಸಾಸುರ ಭಂಜನ ವೇಷಧಾರಿಯೆ ಹರಿವೈಷ್ಣವ ಪ್ರೀಯನೆ
ಪೂಶರನಯ್ಯನೆ ಪುಣ್ಯಚರಿತನೆ
ದೇಶಾಧಿಪತಿ ವೀರ ನರಹರಿ ಕೃಷ್ಣ ನಿನ್ನ 
ದಾಸನಾಗಿಹೆನಯ್ಯಾ ॥ 3 ॥ 

ಅಟ್ಟತಾಳ 

ಅಜಮಿಳ ಧ್ರುವ ಪ್ರಲ್ಹಾದ ನಾರದರಿಗೆ
ಸುಜನರೊಡಿಯ ಸ್ಥಿರ ಪದವಿಯನಿತ್ತು ಸಲಹಿದೆ
ಕುಜನ ಕೌರವ ಪೌಂಡ್ರಕ ಜರಾಸಂಧಗೆ
ವೃಜಿನ ಗತಿಯನಿತ್ತು ಕೋಟಲೆಗೊಳಿಸದೇ
ಭಜಕಜನ ರಕ್ಷಕ ಭಾನುಕೋಟಿತೇಜಾ
ವಿಜಯ ಸಿರಿದೇವಿಯರಸ ನರಹರಿ ಕೃಷ್ಣ
ಸುಜನರೊಡೆಯ ಸ್ಥಿರ ಪದವಿಯನಿತ್ತು ಸಲಹುವೆ ॥ 4 ॥ 

ಏಕತಾಳ 

ಉಟ್ಟ ಪೀತಾಂಬರದುಡಿಗೆಯ ಹರಿ
ಇಟ್ಟ ಕಿರೀಟದ ಪ್ರಭೆ ಎಸೆಯಲು
ಕೋಟಿ ಶಂಖ ಚಕ್ರಧರನೆ ಮುಕ್ತ
ಭಜಿಪರ್ಗೆ ಮುದವಿತ್ತು ಸಲಹುವೆ
ಸೃಷ್ಟಿಗೆ ಅಹೋಬಿಲ ನರಹರಿ ಕೃಷ್ಣ
ಇಷ್ಟಾರ್ಥವ ಕೊಟ್ಟು ರಕ್ಷಿಸು ಸ್ವಾಮಿ ॥ 5 ॥ 

ಜತೆ 

ಬಿಡದೆ ಕಂಡೆನು ನಿನ್ನಯ ದಿವ್ಯ ಪಾದವ ಎನ್ನ
ಮಂಡೆಯೊಳಗಿತ್ತು ಸಲಹೋ ನರಹರಿ ಕೃಷ್ಣ
ಕಂಡೆನು ನಿನ್ನಯ ದಿವ್ಯ ಪಾದವ ॥
******