Showing posts with label ಮಂಗಳೆನ್ನಿರೀ ಸಂಗರಹಿತಗೆ ಮಂಗಳೆನ್ನಿ ಅಭಂಗಾದ್ವೈತಗೆ bheemashankara. Show all posts
Showing posts with label ಮಂಗಳೆನ್ನಿರೀ ಸಂಗರಹಿತಗೆ ಮಂಗಳೆನ್ನಿ ಅಭಂಗಾದ್ವೈತಗೆ bheemashankara. Show all posts

Friday, 6 August 2021

ಮಂಗಳೆನ್ನಿರೀ ಸಂಗರಹಿತಗೆ ಮಂಗಳೆನ್ನಿ ಅಭಂಗಾದ್ವೈತಗೆ ankita bheemashankara

..

 kruti by ಭೀಮಾಶಂಕರರು ದಾಸರು bheemashankara


ಮಂಗಳೆನ್ನಿರೀ ಸಂಗರಹಿತಗೆ ಮಂಗಳೆನ್ನಿ ಅಭಂಗಾದ್ವೈತಗೆ | ಮಂಗಳೆನ್ನೀ ಕೃಪಾಂಗ ಮೂರುತಿ ಲಿಂಗ ಬಸವೇಶಗೆ || ಮಂಗಳೆನ್ನಿ ಜಯ ಶುಭ ಪ


ಬ್ರಹ್ಮರೂಪದಿ ಜಗವನು ಪುಟ್ಟಿಸಿ ಬ್ರಹ್ಮಜನಕನ ನೆತ್ತಿಲಿ ರಕ್ಷಿಸಿ ಬ್ರಹ್ಮ ಮೂರುತಿ ಬಾಲಬ್ರಹ್ಮದಿ ಚರಿಸಿದಾತಂಗೆ ಮಹಾ | ಬ್ರಹ್ಮಾಂಡಕೋಟಿ ಉದರದೊಳಿರಿಸಿ | ಬ್ರಹ್ಮನ ಸ್ತುತಿಗೆ ನಿಲುಕದ ಅವಿನಾಶಿ ಬ್ರಹ್ಮಾದಿ ಸುರವಂದಿತ ರುದ್ರನಾಗಿ ಸಂಹರಿಸಿ 1


ಜಗವನುದ್ಧರಿಸಲು ದೇಹವನು ಜಗದೀಶ್ವರನು ಅವತರಿಸಿ ಬಂದಿಹನು | ಜಗ ಮೃಗಜಲವೆಂದು ತಿಳಿದಿರೆ ಜಗದೊಳಾಡುವಗೆ || ಬಗೆ ಬಗೆಯಲಾಡುತ ಗಗನ ಗಟ್ಟಿಹನು | ನಿಗಮಕೆ ನಿಲ್ಕದೆ ನಿತ್ಯನೆನಿಸುವನು ಝಗಝಗಿಸುವ ಆರತಿಯ ಬೆಳಗಿರೆ ಜಗದ ಜನಕನಿಗೆ 2


ಛಪ್ಪನ್ನ ದೇಶಕೆ ಶೋಭಿಸುವ ಒಪ್ಪುವ ಕೋಳಕೂರೆಂದೆನಿಸುವ ದಿಕ್ಕು ದಕ್ಷಿಣಾ ಭೀಮಾತೀರದಿ ಥಳಥಳದಿ ಹೊಳೆವ |ಶ್ರೀ ಮಹಾಗುರು ಇಪ್ಪತ್ತೊಂದು ಸಮಾಧಿಯೊಳಿರುವತಪ್ಪದೆ ರಾಮಾತ್ಮಜನಾಗಿರುವ | ಸೊಪ್ಪೆರಾಯನು ಸಹಜಾನಂದ ತಾ ಯೋಗಿಯಾಗಿ ಮೆರೆವ 3

***